2036ರ ಒಲಿಂಪಿಕ್ಸ್ ಬಿಡ್‍ಗೆ ಭಾರತ ಸಿದ್ಧ: ಕೇಂದ್ರ ಸಚಿವ ಅನುರಾಗ್ ಠಾಕೂರ್
ಹೊಸದಿಲ್ಲಿ: ಭಾರತ 2036ರ ಒಲಿಂಪಿಕ್ಸ್ (Olympics) ಕ್ರೀಡಾಕೂಟದ ಆತಿಥ್ಯಕ್ಕಾಗಿ ಬಿಡ್ ಮಾಡಲಿದೆ. ಈ ಸಂಬಂಧ ಮುಂದಿನ ಮಾರ್ಗಸೂಚಿಯನ್ನು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ (IOC)ಯ ಪೂರ್ಣ ಸದಸ್ಯರ ಮುಂದೆ ಪ್ರಸ್ತುತಪಡಿಸಲಾಗುವುದು ಎಂದು ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ timesofindiaಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಹೇಳಿದ್ದಾರೆ.
ಭಾರತೀಯ ಒಲಿಂಪಿಕ್ ಅಸೋಸಿಯೇಶನ್, ಒಲಿಂಪಿಕ್ಸ್ ಕ್ರೀಡಾಕೂಟದ ಆತಿಥ್ಯಕ್ಕೆ ಮಾಡುವ ಬಿಡ್ ಬೆಂಬಲಿಸಲಿದೆ. ಗುಜರಾತ್‍ನ ಅಹ್ಮದಾಬಾದ್‍ನಲ್ಲಿ ವಿಶ್ವದರ್ಜೆಯ ಕ್ರೀಡಾ ಮೂಲಸೌಕರ್ಯಗಳು ಇರುವ ಹಿನ್ನೆಲೆಯಲ್ಲಿ ಆತಿಥ್ಯ ವಹಿಸುವ ನಗರವಾಗುವ ಸಾಧ್ಯತೆ ಇದೆ ಎಂದು ತಿಳಿಸಿದರು. 1982ರ ಏಷ್ಯನ್ ಗೇಮ್ಸ್ ಮತ್ತು 2010ರ ಕಾಮನ್‍ವೆಲ್ತ್ ಕ್ರೀಡಾಕೂಟವನ್ನು ಭಾರತ ಆಯೋಜಿಸಿತ್ತು. ಮುಂದಿನ ತಾತ್ವಿಕ ಗುರಿ ಒಲಿಂಪಿಕ್ಸ್ ಕ್ರೀಡಾಕೂಟ ಎಂದು ಸಚಿವರು ಅಭಿಪ್ರಾಯಪಟ್ಟರು.
"ಭಾರತ ದೊಡ್ಡ ಪ್ರಮಾಣದಲ್ಲಿ ಜಿ-20 ಅಧ್ಯಕ್ಷೀಯ ಹೊಣೆಯನ್ನು ನಿಭಾಯಿಸಬಹುದಾದರೆ, ಐಓಸಿಯೊಂದಿಗೆ ಖಂಡಿತವಾಗಿಯೂ ಒಲಿಂಪಿಕ್ಸ್ ಆತಿಥ್ಯ ವಹಿಸುವ ಬಿಡ್ ಸಲ್ಲಿಸುವುದು ಸಾಧ್ಯವಾಗಲಿದೆ ಎಂಬ ವಿಶ್ವಾಸ ನನ್ನದು. 2032ರ ಒಲಿಂಪಿಕ್ಸ್ ಗೆ ಈಗಾಗಲೇ ಕೋರಿಕೆಗಳು ಭರ್ತಿಯಾಗಿವೆ. ಆದರೆ 2036ರ ಬಳಿಕ ನಾವು ನಿರೀಕ್ಷೆ ಇರಿಸಿಕೊಳ್ಳಬಹುದು ಹಾಗೂ ಭಾರತ ಒಲಿಂಪಿಕ್ಸ್ ಗಾಗಿ ಬಿಡ್ ಸಲ್ಲಿಸಲು ಸಂಪೂರ್ಣ ಸಜ್ಜಾಗಿದೆ" ಎಂದು ವಿವರಿಸಿದರು.
ಇದನ್ನೂ ಓದಿ: ಡಿ.31ರಿಂದ 49 ಫೋನ್ ಗಳಲ್ಲಿ ವಾಟ್ಸ್ಆ್ಯಪ್ ಸ್ಥಗಿತಗೊಳ್ಳಲಿದೆ