ರಾಹುಲ್‌ ಗಾಂಧಿಯ ಎಡಿಟೆಡ್‌ ವೀಡಿಯೊ ಪೋಸ್ಟ್ ಮಾಡಿ ಮತ್ತೆ ಸುಳ್ಳುಸುದ್ದಿ ಹರಡಿದ ಬಿಜೆಪಿಯ ಅಮಿತ್‌ ಮಾಳವೀಯ

ನೆಟ್ಟಿಗರಿಂದ ತರಾಟೆ

Update: 2022-12-28 14:14 GMT

ಹೊಸದಿಲ್ಲಿ: ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆಯ ಎಡಿಟ್ ಮಾಡಿದ ವೀಡಿಯೊ ಕ್ಲಿಪ್ ಅನ್ನು ಹಂಚಿಕೊಂಡಿದ್ದಕ್ಕಾಗಿ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯರನ್ನು ಬುಧವಾರ ನೆಟ್ಟಿಗರು ಮತ್ತೊಮ್ಮೆ ತರಾಟೆಗೆ ತೆಗೆದುಕೊಂಡಿದ್ದಾರೆ.

ಬುಧವಾರ ಬೆಳಿಗ್ಗೆ, ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ಮಾಧ್ಯಮ ವರದಿಗಾರರೊಂದಿಗೆ ರಾಹುಲ್ ಗಾಂಧಿಯ ಮಾತುಕತೆಯ ಎಡಿಟ್ ಮಾಡಿದ ವೀಡಿಯೊವನ್ನು ಮಾಳವೀಯ ಪೋಸ್ಟ್ ಮಾಡಿ ತಪ್ಪಾದ ಶೀರ್ಷಿಕೆಯೊಂದಿಗೆ ಪ್ರಕಟಿಸಿದ್ದಾರೆ.

ವೀಡಿಯೋದಲ್ಲಿ ರಾಹುಲ್ ಗಾಂಧಿಯವರು "ಜಬ್ ತಕ್ ಚಲ್ ರಹೀ ಹೈ, ಜಬ್ ನಹೀ ಕಾಮ್ ಕರೇಗಿ ತೋ ರೋಕ್ ದೇಂಗೆ" ಎಂದು ಹೇಳುವುದನ್ನು ಕೇಳಬಹುದು. (ಅದು ಚಾಲನೆಯಲ್ಲಿರುವವರೆಗೆ ... ಅದು ಕೆಲಸ ಮಾಡದಿದ್ದಾಗ, ನಾವು ಅದನ್ನು ನಿಲ್ಲಿಸುತ್ತೇವೆ.)

ಮಾಳವಿಯಾ ಅವರ ಟ್ವೀಟ್‌ಗೆ ಹಲವಾರು ಬಳಕೆದಾರರು ಪ್ರತ್ಯುತ್ತರ ನೀಡಿದ್ದು, ಸಂಪೂರ್ಣ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಇದರಲ್ಲಿ ರಾಹುಲ್ ಟಿ-ಶರ್ಟ್ ಬಗ್ಗೆ ಸ್ಪಷ್ಟವಾದ ಪ್ರಶ್ನೆಗೆ ಉತ್ತರಿಸುತ್ತಿದ್ದರು. ಸುದ್ದಿಗಾರರೊಬ್ಬರು ರಾಹುಲ್ ಗಾಂಧಿ ಅವರ ಟೀ ಶರ್ಟ್ ಬಗ್ಗೆ ಮತ್ತು ಎಷ್ಟು ದಿನ ಇದೇ ಟೀ ಶರ್ಟ್‌ನಲ್ಲಿ ಮುಂದುವರಿಯಲು ಯೋಜಿಸಿದ್ದೀರಾ ಎಂದು ಕೇಳಿದ್ದರು. ಪ್ರಶ್ನೆಗೆ ನಗುತ್ತಲೇ ಉತ್ತರಿಸಿದ ರಾಹುಲ್, "ಜಬ್ ತಕ್ ಚಲ್ ರಹೀ ಹೈ, ಜಬ್ ನಹೀ ಕಾಮ್ ಕರೇಗಿ ತೋ ರೋಕ್ ದೇಂಗೆ" ಎಂದು ಹೇಳಿದ್ದರು.

ತಪ್ಪು ಮಾಹಿತಿಗಳನ್ನು ಹರಡಿ ದೇಶದ ಜನರನ್ನು ದಾರಿತಪ್ಪಿಸುತ್ತಿದ್ದಾರೆ ಎಂದು ಬಳಕೆದಾರರು ಮಾಳವಿಯಾನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥರು ಪ್ರತಿಪಕ್ಷದ ನಾಯಕನ ವಿರುದ್ಧ ದ್ವೇಷವನ್ನು ಹರಡಲು ಪ್ರತಿ ದಿನ ಹೊಸ ರೀತಿಯ ಕೆಳಮಟ್ಟಕ್ಕೆ ಇಳಿಯುತ್ತಿದ್ದಾರೆ ಎಂದು ಹಲವರು ಕಿಡಿಕಾರಿದ್ದಾರೆ.

Similar News