ಮಹಾರಾಷ್ಟ್ರದ ವಿರೋಧ ಪಕ್ಷಗಳ ನಾಯಕರ ಬಂಧನ ಈಡಿ ದುರುಪಯೋಗಕ್ಕೆ ಉತ್ತಮ ನಿದರ್ಶನ: ಶರದ್ ಪವಾರ್

Update: 2022-12-29 05:06 GMT

ಮುಂಬೈ: ಮಹಾರಾಷ್ಟ್ರದ ಮಹಾ ವಿಕಾಸ್ ಅಘಾಡಿ (ಎಂವಿಎ) ಮೈತ್ರಿಕೂಟದ ನಾಯಕರ ಹೆಸರನ್ನು ಪಟ್ಟಿ ಮಾಡಿದ ಎನ್‌ಸಿಪಿ ಮುಖ್ಯಸ್ಥ ಹಾಗೂ  ಮಾಜಿ ಕೇಂದ್ರ ಸಚಿವ ಶರದ್ ಪವಾರ್ Sharad Pawar ಅವರು ಇಂದು ಜಾರಿ ನಿರ್ದೇಶನಾಲಯ (ಈಡಿ)ದಂತಹ ಕೇಂದ್ರ ತನಿಖಾ ಸಂಸ್ಥೆಗಳನ್ನು ಹೇಗೆ "ದುರುಪಯೋಗ" ಮಾಡಬಹುದು ಎಂಬುದಕ್ಕೆ ಎನ್‌ಸಿಪಿಯ ಅನಿಲ್ ದೇಶಮುಖ್, ಶಿವಸೇನೆ (ಉದ್ಧವ್) ನಾಯಕ ಸಂಜಯ್ ರಾವುತ್ ಹಾಗೂ ತಮ್ಮೊಂದಿಗೆ ಇರುವ  ಇತರರ ಬಂಧನವೇ "ಉತ್ತಮ ಉದಾಹರಣೆ" ಎಂದು ಹೇಳಿದ್ದಾರೆ.

ಭವಿಷ್ಯದಲ್ಲಿ ಯಾರಿಗೇ ಆಗಲಿ ಇದೇ ರೀತಿಯ ಪರಿಸ್ಥಿತಿ ಎದುರಾಗದಂತೆ ತಡೆಯಲು ನಾನು ಪ್ರಧಾನಿ ನರೇಂದ್ರ ಮೋದಿ ಹಾಗೂ  ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡುತ್ತೇನೆ ಎಂದು ಅವರು ಹೇಳಿದರು.

ಬಿಜೆಪಿ ಬೆಂಬಲಿತ ಶಿವಸೇನೆ ಬಂಡಾಯದಲ್ಲಿ ಜೂನ್‌ನಲ್ಲಿ ಪದಚ್ಯುತಗೊಂಡ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ-ಎನ್‌ಸಿಪಿ-ಕಾಂಗ್ರೆಸ್ ಸರಕಾರದಲ್ಲಿ ಸಚಿವರಾಗಿದ್ದ  ಅನಿಲ್ ದೇಶಮುಖ್ ಬಿಡುಗಡೆಯಾದ ಒಂದು ದಿನದ ನಂತರ ಪವಾರ್ ಸುದ್ದಿಗಾರರೊಂದಿಗೆ ಮಾತನಾಡಿದರು.

ಈಡಿ ಹಾಗೂ ಸಿಬಿಐ ಯಂತಹ ಕೇಂದ್ರೀಯ ಸಂಸ್ಥೆಗಳ ದುರುಪಯೋಗ ಮಾಡಲಾಗುತ್ತಿದೆ ಎಂದು ಬಿಜೆಪಿ ವಿರುದ್ಧ ಮಹಾರಾಷ್ಟ್ರದಿಂದ ಜಾರ್ಖಂಡ್‌, ಜಾರ್ಖಂಡ್ ನಿಂದ ದಿಲ್ಲಿಯವರೆಗೆ ಸಹಿತ ಇತರ ರಾಜ್ಯಗಳ ವಿರೋಧ ಪಕ್ಷದ ನಾಯಕರು ಆರೋಪಿಸಿದ್ದಾರೆ.

Similar News