ಮಾಜಿ ಡಿಎಂಕೆ ಸಂಸದ ಮಸ್ತಾನ್ ಕೊಲೆ: 10 ದಿನಗಳ ಬಳಿಕ ಬಹಿರಂಗ

Update: 2022-12-30 17:25 GMT

ಚೆನ್ನೈ,ಡಿ.30: ಮಾಜಿ ಡಿಎಂಕೆ ಸಂಸದ ಮಸ್ತಾನ್ ಸಾವಿನ 10 ದಿನಗಳ ಬಳಿಕ ಅದು ಕೊಲೆಯಾಗಿತ್ತು ಎನ್ನುವುದನ್ನು ಪತ್ತೆ ಹಚ್ಚಿರುವ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.

ಡಿ.22ರಂದು ಮಸ್ತಾನ್ ತನ್ನ ಮಗನ ವಿವಾಹದ ಆಮಂತ್ರಣ ಪತ್ರಗಳನ್ನು ಹಂಚಿ ಚೆನ್ನೈನಿಂದ ತಿರುಚ್ಚಿಗೆ ಮರಳುತ್ತಿದ್ದಾಗ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು ಮತ್ತು ಸಮೀಪದ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತ ಪಟ್ಟಿದ್ದರು ಎಂದು ವರದಿಗಳು ಹೇಳಿದ್ದವು. ತನ್ನ ತಂದೆಯ ಸಾವಿನ ಕುರಿತು ಶಂಕೆಯನ್ನು ವ್ಯಕ್ತಪಡಿಸಿ ಮಸ್ತಾನ್ರ ಪುತ್ರ ಗುಡುವಾಂಚೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಮರಣೋತ್ತರ ಪರೀಕ್ಷೆಯಲ್ಲಿ ಮಸ್ತಾನ್ ಶರೀರದಲ್ಲಿ ಬಾಹ್ಯ ಗಾಯಗಳನ್ನು ಉಲ್ಲೇಖಿಸಲಾಗಿದ್ದು,ಶಂಕಿತರ ಬಂಧನಕ್ಕಾಗಿ ಪೊಲೀಸರು ಮೂರು ವಿಶೇಷ ತಂಡಗಳನ್ನು ರಚಿಸಿದ್ದರು. ಮಸ್ತಾನ್ ತನ್ನ ಕೆಲವು ಕುಟುಂಬ ಸದಸ್ಯರೊಡನೆ ಹಣಕಾಸು ವಿವಾದವನ್ನು ಹೊಂದಿದ್ದರು,ಪರಿಣಾಮವಾಗಿ ಅವರ ಮೇಲೆ ನಡೆದಿದ್ದ ಹಲ್ಲೆ ಸಾವಿಗೆ ಕಾರಣವಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.

ಮಸ್ತಾನ್ ಕಾರಿನ ಚಾಲಕನನ್ನೂ ಬಂಧಿಸಲಾಗಿದೆ.

Similar News