ಹದಗೆಟ್ಟ ದಿಲ್ಲಿ ವಾಯುಮಾಲಿನ್ಯ: ಮನೆಯಿಂದಲೇ ಕೆಲಸಕ್ಕೆ ಸರಕಾರ ಸಲಹೆ

Update: 2022-12-31 06:55 GMT

ಹೊಸದಿಲ್ಲಿ: ರಾಜಧಾನಿಯಲ್ಲಿ ಹದಗೆಡುತ್ತಿರುವ ಗಾಳಿಯ ಗುಣಮಟ್ಟದಿಂದಾಗಿ ಕೇಂದ್ರದ ಸಮಿತಿಯು ಅನಿವಾರ್ಯವಲ್ಲದ ನಿರ್ಮಾಣ ಕಾಮಗಾರಿ, ನೆಲಸಮಗೊಳಿಸುವ ಕೆಲಸವನ್ನು ನಿಷೇಧಿಸಿದೆ.  ಮನೆಯಿಂದಲೇ ಕೆಲಸ (ಡಬ್ಲ್ಯುಎಫ್‌ಹೆಚ್) ಮಾಡುವಂತೆ ದಿಲ್ಲಿ ಸರಕಾರ ನಾಗರಿಕರಿಗೆ ಸಲಹೆ ನೀಡಿದೆ.

ದಿಲ್ಲಿಯ 24 ಗಂಟೆಗಳ ಸರಾಸರಿ ವಾಯು ಗುಣಮಟ್ಟ ಸೂಚ್ಯಂಕ ಶುಕ್ರವಾರ 399 ರಷ್ಟಿದೆ. 201 ಹಾಗೂ  300 ರ ನಡುವಿನ ವಾಯು ಗುಣಮಟ್ಟ ಸೂಚ್ಯಂಕ ಅನ್ನು 'ಕಳಪೆ', 301 ಮತ್ತು 400 'ಅತ್ಯಂತ ಕಳಪೆ' ಮತ್ತು 401 ಮತ್ತು 500 'ತೀವ್ರ' ಎಂದು ಪರಿಗಣಿಸಲಾಗುತ್ತದೆ.

ಗಾಳಿ ಹಾಗೂ ಸ್ಥಿರವಾದ ವಾತಾವರಣದ ಪರಿಸ್ಥಿತಿಗಳಿಂದಾಗಿ ವಾಯು ಗುಣಮಟ್ಟ ಸೂಚ್ಯಂಕ 'ತೀವ್ರ' ವರ್ಗಕ್ಕೆ ಜಾರುವ ಸಾಧ್ಯತೆಯಿದೆ ಎಂದು ಕೇಂದ್ರದ ವಾಯು ಗುಣಮಟ್ಟದ ಸಮಿತಿ ಶುಕ್ರವಾರ ತಿಳಿಸಿದೆ.

ಗಾಳಿಯ ಗುಣಮಟ್ಟ ನಾಳೆಯವರೆಗೂ 'ತೀವ್ರ'ವಾಗಿ ಉಳಿಯುವ ಸಾಧ್ಯತೆಯಿದೆ

Similar News