ಜಮ್ಮುಕಾಶ್ಮೀರದಲ್ಲಿ ರಾಷ್ಟ್ರೀಯ ಭದ್ರತೆಯ ಹೆಸರಿನಲ್ಲಿ ಕೇಂದ್ರದ ನಿರಂಕುಶ ನೀತಿಯ ಸಮರ್ಥನೆ: ಮೆಹಬೂಬ ಮುಫ್ತಿ

Update: 2022-12-31 15:04 GMT

ಶ್ರೀನಗರ,ಡಿ.31: ಜಮ್ಮು-ಕಾಶ್ಮೀರದಲ್ಲಿ ನಾಗರಿಕರ ಮೂಲಭೂತ ಹಕ್ಕುಗಳನ್ನು 2019ರಿಂದ ಅಮಾನತುಗೊಳಿಸಲಾಗಿದೆ ಮತ್ತು ಕೇಂದ್ರದ ನಿರಂಕುಶ ನೀತಿಯನ್ನು ರಾಷ್ಟ್ರೀಯ ಭದ್ರತೆಯ ಹೆಸರಿನಲ್ಲಿ ಸಮರ್ಥಿಸಿಕೊಳ್ಳಲಾಗುತ್ತಿದೆ ಎಂದು ಪಿಡಿಪಿ ಅಧ್ಯಕ್ಷೆ ಮೆಹಬೂಬ ಮುಫ್ತಿ(Mehbooba Mufti) ಅವರು ಭಾರತದ ಮುಖ್ಯ ನ್ಯಾಯಾಧೀಶ ಡಿ.ವೈ.ಚಂದ್ರಚೂಡ(D.Y. Chandrachud) ಅವರಿಗೆ ಶನಿವಾರ ಬರೆದಿರುವ ಪತ್ರದಲ್ಲಿ ಹೇಳಿದ್ದಾರೆ.

ಜಮ್ಮು-ಕಾಶ್ಮೀರ ಮತ್ತು ದೇಶದಲ್ಲಿಯ ಪ್ರಚಲಿತ ಸ್ಥಿತಿಯ ಕುರಿತು ತೀವ್ರ ಕಳವಳಗಳನ್ನು ಅವರು ಪತ್ರದಲ್ಲಿ ವ್ಯಕ್ತಪಡಿಸಿದ್ದಾರೆ.

2019ರಿಂದ ಜಮ್ಮು-ಕಾಶ್ಮೀರದ ಪ್ರತಿಯೊಬ್ಬ ಪ್ರಜೆಯ ಮೂಲಭೂತ ಹಕ್ಕುಗಳನ್ನು ನಿರಂಕುಶವಾಗಿ ಅಮಾನತುಗೊಳಿಸಲಾಗಿದೆ ಮತ್ತು ಜಮ್ಮು-ಕಾಶ್ಮೀರ ವಿಲೀನ ಸಂದರ್ಭದಲ್ಲಿ ನೀಡಲಾಗಿದ್ದ ಸಾಂವಿಧಾನಿಕ ಖಾತರಿಗಳನ್ನು ಏಕಾಏಕಿ ಮತ್ತು ಅಸಾಂವಿಧಾನಿಕವಾಗಿ ರದ್ದುಗೊಳಿಸಲಾಗಿದೆ ಎಂದು ಮಾಜಿ ಮುಖ್ಯಮಂತ್ರಿಯೂ ಆಗಿರುವ ಮುಫ್ತಿ ಹೇಳಿದ್ದಾರೆ.

2019ರಿಂದ ಜಮ್ಮು-ಕಾಶ್ಮೀರದ ಪ್ರಜೆಗಳ ವಿಶ್ವಾಸ ಕೊರತೆ ಮತ್ತು ಪರಕೀಯತೆ ಇನ್ನಷ್ಟು ಹೆಚ್ಚಿದೆ ಎಂದು ಪತ್ರದಲ್ಲಿ ತಿಳಿಸಿರುವ ಅವರು,ಮೂಲಭೂತ ಹಕ್ಕು ಆಗಿರುವ ಪಾಸ್ ಪೋರ್ಟ್ ಗಳನ್ನು ನಿರ್ಭಯದಿಂದ ಕಿತ್ತುಕೊಳ್ಳಲಾಗುತ್ತಿದೆ. ಪತ್ರಕರ್ತರನ್ನು ಜೈಲುಗಳಿಗೆ ತಳ್ಳಲಾಗುತ್ತಿದೆ ಮತ್ತು ಅವರು ವಿದೇಶಕ್ಕೆ ಪ್ರಯಾಣಿಸುವುದನ್ನು ತಡೆಯಲಾಗುತ್ತಿದೆ ಎಂದಿದ್ದಾರೆ.

Similar News