ಮಂಕಿಫಾಕ್ಸ್ ಜಾಗತಿಕ ಆರೋಗ್ಯ ತುರ್ತುಸ್ಥಿತಿಯಾಗಿಲ್ಲ: ವಿಶ್ವ ಆರೋಗ್ಯಸಂಸ್ಥೆ

Update: 2023-06-27 10:16 GMT

ಜಿನೆವಾ, ಮೇ 11: ಎಂಪಾಕ್ಸ್ ಕಾಯಿಲೆ(ಈ ಹಿಂದೆ ಮಂಕಿಪಾಕ್ಸ್ ಎಂದು ಕರೆಯಲಾಗುತ್ತಿತ್ತು) ಜಾಗತಿಕ ಆರೋಗ್ಯ ತುರ್ತುಸ್ಥಿತಿಯಾಗಿ ಉಳಿದಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಗುರುವಾರ ಘೋಷಿಸಿದೆ.

ಎಂಪಾಕ್ಸ್ ವೈರಸ್ ಇನ್ನು ಮುಂದಕ್ಕೆ ಅಂತರಾಷ್ಟ್ರೀಯ ಕಾಳಜಿಯ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿಯನ್ನು ಪ್ರತಿನಿಧಿಸುವುದಿಲ್ಲ ಎಂಬ  ತುರ್ತು ಸಮಿತಿಯ ಶಿಫಾರಸನ್ನು ಒಪ್ಪಿಕೊಂಡಿರುವುದಾಗಿ ವಿಶ್ವ ಆರೋಗ್ಯ ಸಂಸ್ಥೆಯ ಪ್ರಧಾನ ನಿರ್ದೇಶಕ ಟೆಡ್ರೋಸ್ ಅಧನಾಮ್ ಘೆಬ್ರಯೇಸಸ್ ಹೇಳಿದ್ದಾರೆ. 

ಸಮಿತಿಯ ಶಿಫಾರಸು ಮತ್ತು ಸಲಹೆಯನ್ನು ಒಪ್ಪಿಕೊಂಡಿದ್ದು ಎಂಪಾಕ್ಸ್ ಜಾಗತಿಕ ಆರೋಗ್ಯ ತುರ್ತುಸ್ಥಿತಿಯಾಗಿ ಉಳಿದಿಲ್ಲ ಎಂದು ಘೋಷಿಸುವುದಾಗಿ ಘೆಬ್ರಯೇಸಸ್ ಹೇಳಿದ್ದಾರೆ. ಕಳೆದ 3 ತಿಂಗಳಲ್ಲಿ ಸುಮಾರು 90%ದಷ್ಟು ಕಡಿಮೆ  ಪ್ರಕರಣ ಪತ್ತೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ವರದಿ ತಿಳಿಸಿದೆ.

Similar News