ಕಾಲ್ತುಳಿತದಿಂದ 8 ಮಂದಿ ಸಾವನ್ನಪ್ಪಿದ ಹಿನ್ನೆಲೆ: ಸಾರ್ವಜನಿಕ ಸಭೆ, ರ್ಯಾಲಿಗಳನ್ನು ರದ್ದುಪಡಿಸಿದ ಆಂಧ್ರಪ್ರದೇಶ ಸರಕಾರ

Update: 2023-01-03 06:44 GMT

ಅಮರಾವತಿ: ಆಂಧ್ರಪ್ರದೇಶ ಸರಕಾರವು ಸಾರ್ವಜನಿಕ ಸುರಕ್ಷತೆಯ ಕಾರಣಕ್ಕಾಗಿ ರಾಷ್ಟ್ರೀಯ ಹೆದ್ದಾರಿಗಳು ಸೇರಿದಂತೆ ರಸ್ತೆಗಳಲ್ಲಿ ಸಾರ್ವಜನಿಕ ಸಭೆಗಳು ಹಾಗೂ  ರ್ಯಾಲಿಗಳನ್ನು ನಡೆಸುವುದನ್ನು ನಿಷೇಧಿಸಿದೆ.

ಕಳೆದ ವಾರ ಕಂದುಕೂರಿನಲ್ಲಿ ಪ್ರಮುಖ ವಿರೋಧ ಪಕ್ಷ ತೆಲುಗು ದೇಶಂ ಪಕ್ಷ ನಡೆಸಿದ ರ್ಯಾಲಿಯಲ್ಲಿ ಕಾಲ್ತುಳಿತ ಸಂಭವಿಸಿ ಎಂಟು ಜನರು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಈ ಆದೇಶ ಹೊರ ಬಂದಿದೆ. ಪೊಲೀಸ್ ಕಾಯಿದೆ, 1861 ರ ನಿಬಂಧನೆಗಳ ಅಡಿಯಲ್ಲಿ ಸೋಮವಾರ ತಡರಾತ್ರಿ ನಿಷೇಧಾಜ್ಞೆ ಹೊರಡಿಸಲಾಗಿದೆ.

"ಸಾರ್ವಜನಿಕ ರಸ್ತೆಗಳು ಮತ್ತು ಬೀದಿಗಳಲ್ಲಿ ಸಾರ್ವಜನಿಕ ಸಭೆ ನಡೆಸುವ ಹಕ್ಕು ಪೊಲೀಸ್ ಕಾಯಿದೆ, 1861 ರ ಸೆಕ್ಷನ್ 30 ರ ಪ್ರಕಾರ ನಿಯಂತ್ರಣದ ವಿಷಯವಾಗಿದೆ" ಎಂದು ಸರಕಾರವು ತನ್ನ ಆದೇಶದಲ್ಲಿ ತಿಳಿಸಿದೆ.

Similar News