ಅಝಂ ಖಾನ್ ವಿರುದ್ಧದ ಕ್ರಿಮಿನಲ್ ಪ್ರಕರಣ: ಉತ್ತರಪ್ರದೇಶದ ಹೊರಗೆ ವರ್ಗಾವಣೆಗೆ ಸುಪ್ರೀಂ ನಕಾರ

Update: 2023-01-04 16:19 GMT

ಹೊಸದಿಲ್ಲಿ,ಜ.4: ಎಸ್ಪಿ ನಾಯಕ ಅಝಂ ಖಾನ್ ವಿರುದ್ಧ ರಾಮಪುರ ನ್ಯಾಯಾಲಯದಲ್ಲಿ ಬಾಕಿಯಿರುವ ಕ್ರಿಮಿನಲ್ ಪ್ರಕರಣವನ್ನು ಉತ್ತರ ಪ್ರದೇಶದಿಂದ ಹೊರಗೆ ವರ್ಗಾಯಿಸಲು ಸರ್ವೋಚ್ಚ ನ್ಯಾಯಾಲಯವು ಬುಧವಾರ ತಿರಸ್ಕರಿಸಿದೆ.

ಪ್ರಕರಣದ ವರ್ಗಾವಣೆಗೆ ಕಾರಣಗಳ ಬಗ್ಗೆ ತಮಗೆ ಮನದಟ್ಟಾಗಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ ಹಾಗೂ ನ್ಯಾಯಮೂರ್ತಿಗಳಾದ ಅಬ್ದುಲ್ ನಝೀರ್ ಮತ್ತು ಪಿ.ಎಸ್.ನರಸಿಂಹ ಅವರ ಪೀಠವು ತಿಳಿಸಿತು. ವಿಚಾರಣೆ ಸಂದರ್ಭ ಖಾನ್ ಪರ ಹಿರಿಯ ವಕೀಲ ಕಪಿಲ್ ಸಿಬಲ್ ಅವರು,ತನ್ನ ಕಕ್ಷಿದಾರರಿಗೆ ರಾಜ್ಯದಲ್ಲಿ ನ್ಯಾಯ ದೊರೆಯುವುದಿಲ್ಲ, ಅವರಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಹೇಳಿದರು.

ಜಿಲ್ಲೆಯ ಬದಲಾವಣೆಗೆ ಏಕೆ ಕೋರಿಲ್ಲ ಎಂಬ ಮುಖ್ಯ ನ್ಯಾಯಮೂರ್ತಿಗಳ ಪ್ರಶ್ನೆಗೆ ಸಿಬಲ್,ನ್ಯಾಯಾಧೀಶರಲ್ಲ,ಅದು ರಾಜ್ಯದ ಪ್ರಶ್ನೆಯಾಗಿದೆ. ರಾಜ್ಯದೊಳಗೆ ಎಲ್ಲ ಕಡೆಯೂ ಒಂದೇ ಸ್ಥಿತಿ ಇದೆ ಎಂದು ಉತ್ತರಿಸಿದರು. ಖಾನ್ ವಿರುದ್ಧ ಕಾನೂನು ಕ್ರಮಕ್ಕೆ ರಾಜ್ಯಪಾಲರು ಅನುಮತಿ ನೀಡಿದ ಜನವರಿ 2019ರ ಪತ್ರವನ್ನು ಉಲ್ಲೇಖಿಸಿದ ಸಿಬಲ್,ಈಗ ತೋರಿಸಲಾಗಿರುವ ಈ ದಾಖಲೆಯಲ್ಲಿ ಸಹಿಗಳಿಲ್ಲ ಎಂದು ತಿಳಿಸಿದರು.

Similar News