ನ್ಯಾಯಮೂರ್ತಿಗಳ ನೇಮಕ: ಮುಂದಿನ ಮೂರು ದಿನಗಳಲ್ಲಿ ಶಿಫಾರಸ್ಸುಗೊಂಡಿರುವ 44 ಹೆಸರುಗಳ ಪ್ರಕ್ರಿಯೆ; ಕೇಂದ್ರ

Update: 2023-01-06 13:21 GMT

ಹೊಸದಿಲ್ಲಿ: ಕೊಲಿಜಿಯಂ ಶಿಫಾರಸ್ಸು ಮಾಡಿರುವ ನ್ಯಾಯಮೂರ್ತಿಗಳ ನೇಮಕಕ್ಕೆ ಸರ್ಕಾರ ಕಾಲಮಿತಿ ಅನುಸರಿಸಲಿದ್ದು, ಮುಂದಿನ ಮೂರು ದಿನಗಳಲ್ಲಿ ಶಿಫಾರಸ್ಸುಗೊಂಡಿರುವ 44 ಹೆಸರುಗಳ ಪ್ರಕ್ರಿಯೆ ಮಾಡಲಾಗುವುದು ಎಂದು ಕೇಂದ್ರವು ಶುಕ್ರವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ಕೊಲಿಜಿಯಂ ಮಾಡಿರುವ 104 ಶಿಫಾರಸುಗಳ ಪೈಕಿ 44 ಶಿಫಾರಸುಗಳನ್ನು ಈ ವಾರಾಂತ್ಯದೊಳಗೆ ಪ್ರಕ್ರಿಯೆಗೊಳಿಸಿ ಸುಪ್ರೀಂ ಕೋರ್ಟ್‌ಗೆ ಕಳುಹಿಸುವ ಸಾಧ್ಯತೆಯಿದೆ ಎಂದು ಅಟಾರ್ನಿ ಜನರಲ್ ಆರ್ ವೆಂಕಟರಮಣಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಕೊಲಿಜಿಯಂ ವ್ಯವಸ್ಥೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮತ್ತು ಸರ್ಕಾರದ ನಡುವೆ ನಡೆಯುತ್ತಿರುವ ಜಗಳದ ನಡುವೆಯೇ ಕೇಂದ್ರದ ಈ ಹೇಳಿಕೆಯು ಬಂದಿದೆ.

ಕೊಲಿಜಿಯಂ ಶಿಫಾರಸು ಮಾಡಿದ ಹೆಸರುಗಳನ್ನು ತೆರವುಗೊಳಿಸುವಲ್ಲಿ ಕೇಂದ್ರದ ವಿಳಂಬಕ್ಕೆ ಸಂಬಂಧಿಸಿದ ವಿಷಯದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಮುಂದಿನ ವಿಚಾರಣೆಯನ್ನು ಫೆಬ್ರವರಿ 3 ಕ್ಕೆ ಮುಂದೂಡಿದೆ.

Similar News