ಏರ್ ಇಂಡಿಯಾ ವಿಮಾನದಲ್ಲಿ ಮಹಿಳೆಯ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ ವ್ಯಕ್ತಿಯನ್ನು ಕೆಲಸದಿಂದ ವಜಾಗೊಳಿಸಿದ ಕಂಪನಿ

Update: 2023-01-07 04:50 GMT

ಹೊಸದಿಲ್ಲಿ: ನವೆಂಬರ್‌ನಲ್ಲಿ ಏರ್ ಇಂಡಿಯಾ ವಿಮಾನದಲ್ಲಿ ವೃದ್ಧೆಯೊಬ್ಬರ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ ಮುಂಬೈ ವ್ಯಕ್ತಿ ಶಂಕರ್ ಮಿಶ್ರಾನನ್ನು ಆತ ಕೆಲಸ ಮಾಡುತ್ತಿರುವ ಕಂಪನಿ ವೆಲ್ಸ್ ಫಾರ್ಗೋ ವಜಾಗೊಳಿಸಿದೆ.

ಶಂಕರ್ ಮಿಶ್ರಾ (34 ವರ್ಷ) ವಿರುದ್ಧದ ಆರೋಪಗಳು "ತುಂಬಾ ಕಳವಳಕಾರಿಯಾಗಿದೆ" ಎಂದು ಕಂಪನಿ ಹೇಳಿದೆ.

ಮಿಶ್ರಾ  ಕ್ಯಾಲಿಫೋರ್ನಿಯಾದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಅಮೆರಿಕದ ಬಹುರಾಷ್ಟ್ರೀಯ ಹಣಕಾಸು ಸೇವೆಗಳ ಸಂಸ್ಥೆಯ ಭಾರತ ವಿಭಾಗದ ಉಪಾಧ್ಯಕ್ಷನಾಗಿ ಕೆಲಸ ಮಾಡಿದ್ದಾನೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

"ವೆಲ್ಸ್ ಫಾರ್ಗೋ ಉದ್ಯೋಗಿಗಳು ವೃತ್ತಿಪರ ಮತ್ತು ವೈಯಕ್ತಿಕ ನಡವಳಿಕೆಯ ಉನ್ನತ ಗುಣಮಟ್ಟವನ್ನು ಹೊಂದಿದ್ದಾರೆ ಹಾಗೂ ಈ ಆರೋಪಗಳು ನಮಗೆ ತುಂಬಾ ಕಳವಳಕ್ಕೆ ಕಾರಣವಾಗಿದೆ. ಈ ವ್ಯಕ್ತಿಯನ್ನು ವೆಲ್ಸ್ ಫಾರ್ಗೋದಿಂದ ವಜಾಗೊಳಿಸಲಾಗಿದೆ" ಎಂದು ಕಂಪನಿಯು ಹೇಳಿಕೆಯಲ್ಲಿ ತಿಳಿಸಿದೆ.

ಶಂಕರ್ ಮಿಶ್ರಾ ನಾಪತ್ತೆಯಾಗಿದ್ದು, ಆತನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿರುವಂತೆಯೇ ಲುಕ್‌ಔಟ್ ನೋಟಿಸ್ ಅಥವಾ ವಿಮಾನ ನಿಲ್ದಾಣದ ಎಚ್ಚರಿಕೆಯನ್ನು ಹೊರಡಿಸಲಾಗಿದೆ.

ನವೆಂಬರ್ 26 ರಂದು ನ್ಯೂಯಾರ್ಕ್-ದಿಲ್ಲಿ ಏರ್ ಇಂಡಿಯಾ ವಿಮಾನದಲ್ಲಿ, ಶಂಕರ್ ಮಿಶ್ರಾ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ  ಮಹಿಳೆಯ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ನಂತರ ತನ್ನ ಹೆಂಡತಿ ಹಾಗೂ  ಮಗುವಿನ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿ ಪೊಲೀಸರಿಗೆ ದೂರು ನೀಡದಂತೆ ವೃದ್ಧ ಮಹಿಳೆಯನ್ನು ಬೇಡಿಕೊಂಡಿದ್ದ ಎನ್ನಲಾಗಿದೆ.

ಏರ್ ಇಂಡಿಯಾ ಈ ವಾರವಷ್ಟೇ ಪೊಲೀಸ್ ದೂರು ದಾಖಲಿಸಿದೆ

Similar News