ಅಂತಾರಾಷ್ಟ್ರೀಯ ವೈಮಾನಿಕ ಸಮರಭ್ಯಾಸದಲ್ಲಿ ಮೊದಲ ಬಾರಿಗೆ ಭಾರತೀಯ ಮಹಿಳಾ ಪೈಲಟ್

ಹೊಸ ದಾಖಲೆ ನಿರ್ಮಿಸಿದ ಅವನಿ ಚತುರ್ವೇದಿ

Update: 2023-01-07 17:50 GMT

ಹೊಸದಿಲ್ಲಿ,ಜ.7: ಭಾರತೀಯ ವಾಯುಪಡೆಯ ಫೈಟರ್ ಯುದ್ಧವಿಮಾನದ ಪ್ರಪ್ರಥಮ ಮಹಿಳಾ ಪೈಲಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಸ್ಕ್ವಾಡ್ರನ್ ಲೀಡರ್ ಅವನಿ ಚತುರ್ವೇದಿ ಅವರು ಜಪಾನ್ ನಲ್ಲಿ ನಡೆಯಲಿರುವ ಜಂಟಿ ವೈಮಾನಿಕ ಸಮರಾಭ್ಯಾಸದಲ್ಲಿ ಪಾಲ್ಗೊಳ್ಳಲಿದ್ದಾರೆ. ‘ವೀರ್ ಗಾರ್ಡಿಯನ್-2023’ ಎಂದು ಹೆಸರಿಡಲಾದ ಈ ಜಂಟಿ ಸಮರಾಭ್ಯಾಸವು ಜಪಾನ್ ನ ಹ್ಯಾಕುರಿ ವಾಯುನೆಲೆಯಲ್ಲಿ ಜನವರಿ 12ರಿಂದ 26ರವರೆಗೆ ನಡೆಯಲಿದೆ.

ವೈಮಾನಿಕ ಕವಾಯತಿನಲ್ಲಿ ಅವನಿ ಅವರ ಪಾಲ್ಗೊಳ್ಳುವಿಕೆಯೊಂದಿಗೆ, ಭಾರತೀಯ ವಾಯುಪಡೆಯ ಮಹಿಳಾ ಫೈಟರ್ ಪೈಲಟ್ ಒಬ್ಬರು ಮೊದಲ ಬಾರಿಗೆ ಜಂಟಿ ಅಂತಾರಾಷ್ಟ್ರೀಯ ಸಮರಾಭ್ಯಾಸದಲ್ಲಿ ಮೊದಲ ಬಾರಿಗೆ ಪ್ರವೇಶ ಪಡೆದಂತಾಗಿದೆ. ಜಪಾನ್ ನಲ್ಲಿ ನಡೆಯಲಿರುವ ಜಂಟಿ ಸಮರಾಭ್ಯಾಸದಲ್ಲಿ ಮಹಿಳಾ ವೈದ್ಯಾಧಿಕಾರಿ ಸೇರಿದಂತೆ 139 ಮಂದಿ ಭಾರತೀಯ ವಾಯುಪಡೆಯ ಸಿಬ್ಬಂದಿ ಭಾಗವಹಿಸಲಿದ್ದಾರೆ ಎಂದು ಐಎಎಫ್ ನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

2016ರಲ್ಲಿ ಭಾರತೀಯ ವಾಯುಪಡೆಗೆ ಫೈಟರ್ ಪೈಲಟ್ ಗಳಾಗಿ ಅವನಿ ಚತುರ್ವೇದಿ ಸೇರಿದಂತೆ ಮೂವರು ಮಹಿಳೆಯರು ನಿಯೋಜಿತರಾಗಿದ್ದರು. ಅವನಿ ಅವರು ‘ಮಿಗ್21 ಬೈಸನ್’ ಹಾಗೂ ‘ಸುಖೊಯ್- 30’ ಫೈಟರ್ಜೆಟ್ ಗಳ ಹಾರಾಟದಲ್ಲಿ ತರಬೇತಿ ಪಡೆದಿದ್ದಾರೆ.

Similar News