2013ರ ಕಾಂಗ್ರೆಸ್ ಕಾರ್ಯಕರ್ತನ ಹತ್ಯೆ ಪ್ರಕರಣ: ಹಿಂದೂ ರಾಷ್ಟ್ರ ಸೇನಾ ಕಾರ್ಯಕರ್ತರಿಗೆ ಜೀವಾವಧಿ ಶಿಕ್ಷೆ

Update: 2023-01-13 09:33 GMT

ಪುಣೆ: 2013ರಲ್ಲಿ ಹಡಪ್‌ಸರ್‌ನ ಗೊಂಧಲೆ ನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತ ಪ್ರಕಾಶ್ ಅಣ್ಣಾ ನಾರಾಯಣ ಜೊಂಧಲೆ (46) ಅವರನ್ನು ಹತ್ಯೆ ಮಾಡಿದ್ದಕ್ಕಾಗಿ ಪುಣೆ ನ್ಯಾಯಾಲಯವು ಒಂಬತ್ತು ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ ಎಂದು indianexpress.com ವರದಿ ಮಾಡಿದೆ.

ಶಿಕ್ಷೆಗೊಳಗಾದ ಅಪರಾಧಿಗಳನ್ನು ವಿಕ್ಕಿ ಜಾಧವ್, ವೈಭವ್ ಭದಾಲೆ, ಅಕ್ಷಯ್ ಇಂಗುಲ್ಕರ್, ಶ್ರೀಕಾಂತ್ ಅಟೋಲೆ, ಅಮೋಲ್ ಶೆಗ್ಡೆ, ರಾಹುಲ್ ಕೌಲೆ, ವಿಕ್ಕಿ ಪಾಟೀಲ್, ಸೂರಜ್ ಫಡ್ಕೆ ಮತ್ತು ಆಕಾಶ್ ಶಿಂಧೆ ಎಂದು ಗುರುತಿಸಲಾಗಿದೆ. ಅವರಲ್ಲಿ ಹೆಚ್ಚಿನವರು ಮೂಲಭೂತವಾದಿ ಹಿಂದುತ್ವ ಸಂಘಟನೆಯಾದ ಹಿಂದೂ ರಾಷ್ಟ್ರ ಸೇನೆಯೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 302 (ಕೊಲೆ), 506-2 (ಕ್ರಿಮಿನಲ್ ಬೆದರಿಕೆ) ಮತ್ತು ಕ್ರಿಮಿನಲ್ ಕಾನೂನು ತಿದ್ದುಪಡಿ ಕಾಯಿದೆಯ ಸೆಕ್ಷನ್ 7 ರ ಅಡಿಯಲ್ಲಿ ಅಪರಾಧಿಗಳೆಂದು ಪರಿಗಣಿಸಿ ನ್ಯಾಯಾಲಯವು ಎಲ್ಲಾ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ ಎಂದು ವಕೀಲ ಉಜ್ವಲ್ ನಿಕಮ್ ಹೇಳಿದರು. ಅವರು ಈ ಪ್ರಕರಣದಲ್ಲಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ನೇಮಕಗೊಂಡಿದ್ದರು.

ಪ್ರಕರಣದ ವಿಚಾರಣೆಯನ್ನು ಸೆಷನ್ಸ್ ನ್ಯಾಯಾಧೀಶ ಕೆ ಪಿ ನಾಂದೇಡ್ಕರ್ ಅವರ ಮುಂದೆ ನಡೆಸಲಾಯಿತು. ಈ ಪ್ರಕರಣದಲ್ಲಿ ಪ್ರಾಸಿಕ್ಯೂಷನ್ 19 ಸಾಕ್ಷಿಗಳನ್ನು ವಿಚಾರಣೆ ನಡೆಸಿತು. ನ್ಯಾಯವಾದಿ ನಿಕಮ್ ಅವರು ಜೊಂಧಲೆ ಅವರನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ ಮತ್ತು ಈ ಪ್ರಕರಣದ ದೂರುದಾರರ ಮೇಲೂ ದಾಳಿ ಮಾಡಲಾಗಿದೆ ಎಂದು ವಾದಿಸಿದರು.

ಇದನ್ನೂ ಓದಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಗೆ ಝಡ್- ಶ್ರೇಣಿಯ ಭದ್ರತೆ; 33 CRPF ಕಮಾಂಡೋಗಳಿಂದ ರಕ್ಷಣೆ

Similar News