ಕೊಲೆ ಯತ್ನ ಪ್ರಕರಣದಲ್ಲಿ ಜೈಲು ಶಿಕ್ಷೆ: ಲೋಕಸಭೆಯಿಂದ ಲಕ್ಷದ್ವೀಪ ಸಂಸದ ಮುಹಮ್ಮದ್ ಫೈಝಲ್ ಅನರ್ಹ

Update: 2023-01-14 05:29 GMT

ತಿರುವನಂತಪುರಂ/ಹೊಸದಿಲ್ಲಿ: ಕೇಂದ್ರಾಡಳಿತ ಪ್ರದೇಶದ ನ್ಯಾಯಾಲಯದಿಂದ  ಕೊಲೆ ಯತ್ನ ಪ್ರಕರಣದಲ್ಲಿ ಇತ್ತೀಚೆಗೆ ಜೈಲು ಶಿಕ್ಷೆಗೆ ಗುರಿಯಾಗಿರುವ ಲಕ್ಷದ್ವೀಪ ಸಂಸದ ಮುಹಮ್ಮದ್ ಫೈಝಲ್  (Lakshadweep MP Mohammed Faizal)ಅವರನ್ನು ಅನರ್ಹಗೊಳಿಸಿ ಲೋಕಸಭೆ ಸೆಕ್ರೆಟರಿಯೇಟ್ ಅಧಿಸೂಚನೆ ಹೊರಡಿಸಿದೆ.

ಶುಕ್ರವಾರ ಹೊರಡಿಸಿದ ಅಧಿಸೂಚನೆಯ ಪ್ರಕಾರ, ಫೈಝಲ್ ಅವರು ಕವರಟ್ಟಿಯ ಸೆಷನ್ಸ್ ನ್ಯಾಯಾಲಯದಿಂದ ಶಿಕ್ಷೆಗೆ ಗುರಿಯಾದ ಜನವರಿ 11 ರಿಂದ ಲೋಕಸಭೆಯ ಸದಸ್ಯತ್ವದಿಂದ ಅನರ್ಹರಾಗಿದ್ದಾರೆ.

ಈ ನಿರ್ಧಾರವನ್ನು ಭಾರತದ ಸಂವಿಧಾನದ 102 (ಎಲ್) (ಇ) ನಿಬಂಧನೆಗಳ ಅಡಿ ಹಾಗೂ 1951 ರ ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್ 8 ಅಡಿಯಲ್ಲಿ.ತೆಗೆದುಕೊಳ್ಳಲಾಗಿದೆ.

ಫೈಝಲ್ ಸೇರಿದಂತೆ ನಾಲ್ವರು ಕೊಲೆ ಯತ್ನ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಸಾಬೀತಾದ ನಂತರ ಲಕ್ಷದ್ವೀಪ ನ್ಯಾಯಾಲಯವು ಬುಧವಾರ  10 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

2009ರ ಲೋಕಸಭೆ ಚುನಾವಣೆ ವೇಳೆ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಪಿಎಂ ಸಯೀದ್ ಅವರ ಅಳಿಯ ಮುಹಮ್ಮದ್ ಸಾಲಿಹ್ ಅವರನ್ನು ಕೊಲ್ಲಲು ಯತ್ನಿಸಿದ ಅಪರಾಧಿಗಳಿಗೆ ಕವರಟ್ಟಿ ಸೆಷನ್ಸ್ ನ್ಯಾಯಾಲಯ ತಲಾ  1 ಲಕ್ಷ ರೂ. ದಂಡ ವಿಧಿಸಿದೆ.

Similar News