ಇಂದು ಸೇನಾ ದಿನ: 1949ರ ನಂತರ ಮೊದಲ ಬಾರಿ ದಿಲ್ಲಿಯಿಂದ ಹೊರಗೆ ಆರ್ಮಿ ಡೇ ಪರೇಡ್

Update: 2023-01-15 05:37 GMT

ಹೊಸದಿಲ್ಲಿ: ದಿಲ್ಲಿಯಲ್ಲಿ ನಡೆಯುತ್ತಿದ್ದ ಆರ್ಮಿ ಡೇ ಪರೇಡ್ ಅನ್ನು ಮೊದಲ ಬಾರಿಗೆ ರಾಷ್ಟ್ರ ರಾಜಧಾನಿಯಿಂದ ಹೊರಗೆ ಸ್ಥಳಾಂತರಿಸಲಾಗುವುದು ಹಾಗೂ  ಬೆಂಗಳೂರಿನಲ್ಲಿ ಪರೇಡ್ ಗ್ರೌಂಡ್, MEG & ಸೆಂಟರ್‌ನಲ್ಲಿ ನಡೆಯಲಿದೆ ಎಂದು NDTV ವರದಿ ಮಾಡಿದೆ.

1949 ರ ನಂತರ ಮೊದಲ ಬಾರಿ ದಿಲ್ಲಿಯ ಹೊರಗೆ  ಮೊದಲ ಬಾರಿ  75 ನೇ ವರ್ಷದ ಸೇನಾ ದಿನವನ್ನು ಆಯೋಜಿಸಲಾಗುತ್ತಿದೆ.

ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಅವರು ಪರೇಡ್ ಅನ್ನು ಪರಿಶೀಲಿಸುತ್ತಾರೆ ಹಾಗೂ  ಶೌರ್ಯ ಪ್ರಶಸ್ತಿಗಳನ್ನು ನೀಡುತ್ತಾರೆ, ನಂತರ ಆರ್ಮಿ ಸರ್ವೀಸ್ ಕಾರ್ಪ್ಸ್ (ಎಎಸ್‌ಸಿ) ಟೊರ್ನಾಡೋಸ್‌ನಿಂದ ಸಾಹಸಮಯ ಮೋಟಾರ್‌ಸೈಕಲ್ ಪ್ರದರ್ಶನ, ಪ್ಯಾರಾಟ್ರೂಪರ್‌ಗಳಿಂದ ಸ್ಕೈಡೈವಿಂಗ್ ಪ್ರದರ್ಶನ, ಡೇರ್‌ಡೆವಿಲ್ ಜಂಪ್‌ಗಳು ಹಾಗೂ ಆರ್ಮಿ ಏವಿಯೇಷನ್ ಕಾರ್ಪ್ಸ್ ಹೆಲಿಕಾಪ್ಟರ್‌ಗಳ ಹಾರಾಟ ನಡೆಯಲಿದೆ.

ದೇಶವು ಜ.15ರಂದು  75ನೇ 'ಭಾರತೀಯ ಸೇನಾ ದಿನ' ಆಚರಿಸುತ್ತಿದೆ. ಫೀಲ್ಡ್ ಮಾರ್ಷಲ್   ಕೆ.ಎಂ.ಕಾರ್ಯಪ್ಪ ಅವರು 1949ರ ಜನವರಿ 15ರಂದು ಭಾರತೀಯ ಸೇನೆಯ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡರು. ಅದಕ್ಕೂ ಮುನ್ನ ಸರ್‌ ಫ್ರಾನ್ಸಿಸ್‌ ರಾಬರ್ಟ್‌ ರಾಯ್‌ ಬುಚರ್‌ ಅವರು ನಮ್ಮ ದೇಶದ ಸೇನೆಯ ಕಮಾಂಡರ್‌ ಆಗಿದ್ದರು. ಈ ಐತಿಹಾಸಿಕ ದಿನದ ನೆನಪಿಗಾಗಿ ಪ್ರತಿವರ್ಷ ಜನವರಿ 15 ಅನ್ನು 'ಭಾರತೀಯ ಸೇನಾ ದಿನ' ಎಂದು ಆಚರಿಸಲಾಗುತ್ತದೆ.

ಪುಣೆಯಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ದಕ್ಷಿಣ ಕಮಾಂಡ್‌ನ ಮೇಲ್ವಿಚಾರಣೆಯಲ್ಲಿ ಈ ವರ್ಷ   ಸೇನಾ ದಿನಾಚರಣೆಗಳು ನಡೆಯುತ್ತಿವೆ.

2023 ರ ಮೊದಲು  ದಿಲ್ಲಿ  ಕಂಟೋನ್ಮೆಂಟ್‌ನ ಕಾರ್ಯಪ್ಪ ಪರೇಡ್ ಮೈದಾನದಲ್ಲಿ ಸೇನಾ ದಿನದ ಪರೇಡ್ ನಡೆಯುತ್ತಿತ್ತು.

Similar News