ಹೈದರಾಬಾದ್ ನ ಎಂಟನೇ ನಿಝಾಮ್ ಮುಕರಮ್ ಜಾಹ್ ಟರ್ಕಿಯಲ್ಲಿ ನಿಧನ

Update: 2023-01-15 16:50 GMT

ಹೈದರಾಬಾದ್,ಜ.15: ಹೈದರಾಬಾದ್ನ ಎಂಟನೇ ನಿಝಾಮ್ ನವಾಬ್ ಮೀರ್ ಬರ್ಕತ್ ಅಲಿ ಖಾನ್ ವಾಲಾಷನ್ ಮುಕರಮ್ ಜಾಹ್ ಬಹಾದೂರ್(89) ಅವರು ಶನಿವಾರ ರಾತ್ರಿ 10:30ರ ಸುಮಾರಿಗೆ ಟರ್ಕಿಯ ಇಸ್ತಾಂಬುಲ್ನಲ್ಲಿ ನಿಧನರಾಗಿದ್ದಾರೆ.

ತನ್ನ ಅಂತ್ಯಸಂಸ್ಕಾರವನ್ನು ತವರೂರಿನಲ್ಲಿ ನಡೆಸಬೇಕು ಎಂಬ ನಿಝಾಮ್ರ ಇಚ್ಛೆಯಂತೆ ಅವರ ಮಕ್ಕಳು ಜ.17ರಂದು ಪಾರ್ಥಿವ ಶರೀರದೊಂದಿಗೆ ಹೈದ್ರಾಬಾದ್ ತಲುಪಲಿದ್ದಾರೆ.

ಹೈದ್ರಾಬಾದ್ಗೆ ಆಗಮಿಸಿದ ಬಳಿಕ ಪಾರ್ಥಿವ ಶರೀರವನ್ನು ಚೌಮಹಲ್ಲಾ ಅರಮನೆಗೆ ಒಯ್ದು,ಧಾರ್ಮಿಕ ವಿಧಿಗಳನ್ನು ಪೂರೈಸಿದ ಬಳಿಕ ಪೂರ್ವಜರ ಗೋರಿಗಳಿರುವ ಅಸಫ್ ಜಾಹಿ ರಾಜವಂಶದ ಸಮಾಧಿ ಸ್ಥಳದಲ್ಲಿ ದಫನ ಮಾಡಲಾಗುವುದು ಎಂದು ಬಲ್ಲ ಮೂಲಗಳು ತಿಳಿಸಿವೆ.

Similar News