ದಿಲ್ಲಿಯಲ್ಲಿ ಕನಿಷ್ಠ ತಾಪಮಾನ 1.4 ಡಿಗ್ರಿ ಸೆಲ್ಸಿಯಸ್‌ಗೆ ಕುಸಿತ

Update: 2023-01-16 04:39 GMT

ಹೊಸದಿಲ್ಲಿ: ದಿಲ್ಲಿ ಹಾಗೂ  ಅದರ ಅಕ್ಕಪಕ್ಕದ ಪ್ರದೇಶಗಳಲ್ಲಿನ ಜನರು ಮುಂಜಾನೆಯ ವಿಪರೀತ ಚಳಿಯಿಂದ ತತ್ತರಗೊಂಡಿದ್ದಾರೆ. , ರಾಷ್ಟ್ರ ರಾಜಧಾನಿಯಲ್ಲಿ ಕನಿಷ್ಠ ತಾಪಮಾನವು 1.4 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿದೆ . ಈ ಋತುವಿನಲ್ಲಿ ಇದುವರೆಗಿನ ಅತ್ಯಂತ ಕನಿಷ್ಠ ತಾಪಮಾನ  ಇದಾಗಿದೆ.

ಪಂಜಾಬ್, ಹರ್ಯಾಣ, ಚಂಡೀಗಢ, ಉತ್ತರ ಪ್ರದೇಶ ಹಾಗೂ  ರಾಜಸ್ಥಾನದ ಕೆಲವು ಭಾಗಗಳಲ್ಲಿ ಶೀತ ಅಲೆಗಳ ಪರಿಸ್ಥಿತಿಗಳು ಹಾಗೂ  ಮಂಜಿನ ವಾತಾವರಣವು ಮುಂದುವರಿದಿದೆ.

ಮುಂದಿನ ಮೂರು ದಿನಗಳ ಕಾಲ ಉತ್ತರ ಭಾರತದ ಕೆಲವು ಭಾಗಗಳಲ್ಲಿ ತೀವ್ರವಾದ ಶೀತ ಅಲೆಗಳು ಹಾಗೂ  ಮಂಜಿನ ಕಾಟದ ಬಗ್ಗೆ ಭಾರತೀಯ ಹವಾಮಾನ ಇಲಾಖೆ (IMD) ಎಚ್ಚರಿಕೆ ನೀಡಿದೆ.

ಉತ್ತರ ಭಾರತದ ಭಾಗಗಳಲ್ಲಿ ದಟ್ಟವಾದ ಮಂಜಿನ ಸ್ಥಿತಿಯು ಗೋಚರತೆಯನ್ನು ಕಡಿಮೆಗೊಳಿಸಿದ್ದು, ಹಲವಾರು ರೈಲುಗಳ ಸಂಚಾರ ವಿಳಂಬವಾಗಿದೆ

ಮುಂದಿನ ಕೆಲವು ದಿನಗಳಲ್ಲಿ ವಾಯುವ್ಯ ಹಾಗೂ  ಮಧ್ಯ ಭಾರತದ ಹಲವು ಭಾಗಗಳಲ್ಲಿ ಕನಿಷ್ಠ ತಾಪಮಾನವು ಸುಮಾರು 2 ಡಿಗ್ರಿ ಸೆಲ್ಸಿಯಸ್‌ನಷ್ಟು ಕುಸಿಯುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Similar News