ಅರುಣಾಚಲ ಗಡಿ ಸಮೀಪ ಚೀನಾದಿಂದ ಜಲವಿದ್ಯುತ್ ಅಣೆಕಟ್ಟು ನಿರ್ಮಾಣ: ಬ್ರಹ್ಮಪುತ್ರಾ ನದಿ ನೀರು ತಿರುಗಿಸುವ ಸಾಧ್ಯತೆ

ಅಣೆಕಟ್ಟಿನಿಂದಾಗಿ ಭಾರತ, ಬಾಂಗ್ಲಾಕ್ಕೆ ಎದುರಾಗಲಿದೆ ನೀರಿನ ಕೊರತೆ , ನೆರೆಯ ಭೀತಿ

Update: 2023-01-17 17:27 GMT

ಹೊಸದಿಲ್ಲಿ,ಜ.17: ಚೀನಾವು ಯಾರ್ಲುಂಗ್ ತ್ಸಾಂಗ್ಪೋ(Yarlung Tsangpo) ನದಿಗೆ 60 ಸಾವಿರ ಮೆಗಾವ್ಯಾಟ್ ಸಾಮರ್ಥ್ಯದ ಅಣೆಕಟ್ಟು ಒಂದನ್ನು ಚೀನಾ ನಿರ್ಮಿಸುತ್ತಿದೆಯೆಂದು ವಿದ್ಯುತ್ ಸಚಿವಾಲಯದ ಮೂಲಗಳು ತಿಳಿಸಿವೆ. ನಿರ್ಮಾಣಹಂತದಲ್ಲಿರುವ ಈ ಅಣೆಕಟ್ಟು ಮೆಡೊಗ್ ಗಡಿಯಲ್ಲಿದ್ದು, ಅರುಣಾಚಲ ಪ್ರದೇಶಕ್ಕೆ ಅತ್ಯಂತ ಸನಿಹದಲ್ಲಿದೆ.

ಚೀನಾ ನಿರ್ಮಿಸುತ್ತಿರುವ ಅಣೆಕಟ್ಟಿನ ಬಗ್ಗೆ ಭಾರತವು ಆತಂಕವನ್ನು ಹೊಂದಿದೆ. ಅಣೆಕಟ್ಟು ಪೂರ್ಣಗೊಂಡ ಆನಂತರ ಚೀನಾವು ಬ್ರಹ್ಮಾಪುತ್ರ ನದಿಯ ನೀರನ್ನು ಬೇರೆಡೆಗೆ ತಿರುಗಿಸುವ ಸಾಧ್ಯತೆಯಿದೆಯೆನ್ನಲಾಗಿದೆ.

ಅಷ್ಟು ಮಾತ್ರವಲ್ಲದೆ, ಈ ಅಣೆಕಟ್ಟಿನಿಂದ ನೀರಿನ ಹರಿವನ್ನು ನಿಲ್ಲಿಸಿದಲ್ಲಿ ನೆರೆಪರಿಸ್ತಿತಿ ಉಂಟಾಗುವ ಅಪಾಯವಿದೆಯೆಂದು ಅವು ಹೇಳಿವೆ. ಚೀನಾದ ಈ ಅಣೆಕಟ್ಟಿನಿಂದಾಗಿ ಅರುಣಾಚಲ ಪ್ರದೇಶ ಹಾಗೂ ಅಸ್ಸಾಂನಲ್ಲಿ ನೀರಿನ ಕೊರತೆ ಅಥವಾ ಪ್ರವಾಹ ಪರಿಸ್ಥಿತಿಯು ತಲೆದೋರಲಿದೆಯೆಂದು ವಿದ್ಯುತ್ ಸಚಿವಾಲಯದ ಮೂಲಗಳು ತಿಳಿಸಿವೆ.

ಈ ಅಣೆಕಟ್ಟಿನ ನಿರ್ಮಾಣದಿಂದಾಗಿ ಭಾರತ ಮಾತ್ರವಲ್ಲದೆ ಬಾಂಗ್ಲಾದ ಮೇಲೂ ಪರಿಣಾಮವುಂಟಾಗಲಿದೆ. ಆದರೆ ಅಂತಹ ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಭಾರತವು ಸನ್ನದ್ಧವಾಗಿದ್ದು, ಅರುಣಾಚಲಪ್ರದೇಶದಲ್ಲಿ ಹಲವಾರು ಅಣೆಕಟ್ಟುಗಳನ್ನು ನಿರ್ಮಿಸಲು ಸಿದ್ಧತೆಗಳನ್ನು ನಡೆಸುತ್ತಿರುವುದಾಗಿ ಮೂಲಗಳು ಹೇಳಿವೆ.

Similar News