ಕೋವಿಡ್ ಸೋಂಕಿನ ವರದಿಯಲ್ಲಿ ಪಾಶ್ಚಿಮಾತ್ಯ ಮಾಧ್ಯಮದ ರಾಜಕೀಯ: ಚೀನಾ ಆಕ್ರೋಶ

Update: 2023-01-19 18:44 GMT

ಬೀಜಿಂಗ್, ಜ.19: ತನ್ನ ಕಟ್ಟುನಿಟ್ಟಾದ ಶೂನ್ಯ ಕೋವಿಡ್ ನೀತಿಯ ಹಠಾತ್ ಅಂತ್ಯದ ಕುರಿತು ಕೆಲವು ಪಾಶ್ಚಿಮಾತ್ಯ ಮಾಧ್ಯಮಗಳು ದಾರಿತಪ್ಪಿಸುವ, ಸುಳ್ಳು ಮತ್ತು ತಿರುಚಿದ ವರದಿಯನ್ನು ಪ್ರಕಟಿಸಿವೆ ಎಂದು ಚೀನಾ ಗುರುವಾರ ಆರೋಪಿಸಿದೆ.ಡಿಸೆಂಬರ್ನಲ್ಲಿ ಸಾಮೂಹಿಕ ಸೋಂಕು ಪರೀಕ್ಷೆ, ಕಡ್ಡಾಯ ಕ್ವಾರಂಟೈನ್ಗಳನ್ನು ರದ್ದುಗೊಳಿಸಿದಂದಿನಿಂದ ಚೀನಾದಲ್ಲಿ ಸೋಂಕು ಪ್ರಕರಣ ಹಠಾತ್ತನೆ ಏರಿಕೆಯಾಗಿದೆ ಮತ್ತು ಆಸ್ಪತ್ರೆಗಳಿಗೆ ದಾಖಲಾಗುವವರ ಸಂಖ್ಯೆಯೂ ಹೆಚ್ಚಿದೆ.ಸೋಂಕಿನ ನಿಯಂತ್ರಣಕ್ಕೆ ಚೀನಾ ಕೈಗೊಂಡ ಪರಿಣಾಮಕಾರಿ ಕ್ರಮಗಳ ಬಗ್ಗೆ ಪಾಶ್ಚಿಮಾತ್ಯ ಮಾಧ್ಯಮಗಳು ಪಕ್ಷಪಾತತನದ, ರಾಜಕೀಯ ಪ್ರೇರಿತ ಸುಳ್ಳುಸುದ್ಧಿಗಳನ್ನು ಪ್ರಸಾರ ಮಾಡುತ್ತಿವೆ. ಸರಕಾರದ ಕ್ರಮಗಳ ಬಳಿಕ ಹಲವು ಪ್ರದೇಶಗಳಲ್ಲಿ ಕೋವಿಡ್ ಸೋಂಕಿನ ಉತ್ತುಂಗ ಮಟ್ಟ ಅಂತ್ಯಗೊಂಡಿದ್ದು ಜನಜೀವನ ನಿಧಾನಕ್ಕೆ ಸಹಜಸ್ಥಿತಿಗೆ ಮರಳುತ್ತಿದೆ ಎಂದು ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷದ ಮುಖವಾಣಿ ‘ಪೀಪಲ್ಸ್ ಡೈಲಿ’ ವರದಿ ಮಾಡಿದೆ.

Similar News