ಕಾಳಿ ಭಿತ್ತಿಚಿತ್ರ ವಿವಾದ: ಸುಪ್ರೀಂಕೋರ್ಟ್‌ನಿಂದ ನಿರ್ದೇಶಕಿ ಮಣಿಮೇಘಲೈಗೆ ಮಧ್ಯಂತರ ಜಾಮೀನು ಮಂಜೂರು

Update: 2023-01-20 09:24 GMT

ಹೊಸದಿಲ್ಲಿ: 'ಕಾಳಿ' ಸಾಕ್ಷ್ಯಚಿತ್ರದ ಭಿತ್ತಿಚಿತ್ರವನ್ನು ಪೋಸ್ಟ್ ಮಾಡಿ ವಿವಾದಕ್ಕೀಡಾಗಿದ್ದ ನಿರ್ದೇಶಕಿ ಲೀನಾ ಮಣಿಮೇಕಲೈ ವಿರುದ್ಧ ಯಾವುದೇ ಬಲವಂತದ ಕ್ರಮಗಳನ್ನು ಜರುಗಿಸದಂತೆ ಪೊಲೀಸರಿಗೆ ನಿರ್ದೇಶನ ನೀಡಿರುವ ಸುಪ್ರೀಂಕೋರ್ಟ್, ಅವರಿಗೆ ಶುಕ್ರವಾರ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಈ ಸಂಬಂಧ ಮಣಿಮೇಘಲೈ ವಿರುದ್ಧ ಹಲವಾರು ಪ್ರಾಥಮಿಕ ಮಾಹಿತಿ ವರದಿಗಳು ದಾಖಲಾಗಿದ್ದವು ಎಂದು indiatoday.in ವರದಿ ಮಾಡಿದೆ.

ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ನ್ಯಾಯಪೀಠವು, ಕಾಳಿ ಭಿತ್ತಿಚಿತ್ರದ ವಿರುದ್ಧ ಈಗಾಗಲೇ ದಾಖಲಾಗಿರುವ ಪ್ರಾಥಮಿಕ ಮಾಹಿತಿ ವರದಿಗಳು ಅಥವಾ ಮುಂದೆ ದಾಖಲಾಗಬಹುದಾದ ಪ್ರಾಥಮಿಕ ಮಾಹಿತಿ ವರದಿಗಳನ್ನು ಆಧರಿಸಿ ನಿರ್ದೇಶಕಿಯ ವಿರುದ್ಧ ಯಾವುದೇ ಬಗೆಯ ಬಲವಂತದ ಕ್ರಮಗಳನ್ನು ಜರುಗಿಸಬಾರದು ಎಂದು ಪೊಲೀಸರಿಗೆ ಸೂಚಿಸಿದೆ.

Similar News