ಅಣ್ಣಾಮಲೈ ನೇತೃತ್ವದಲ್ಲಿ ಟಿವಿ ವಾಹಿನಿ ಆರಂಭಿಸಲಿರುವ ತಮಿಳುನಾಡು ಬಿಜೆಪಿ

Update: 2023-01-23 12:13 GMT

ಚೆನ್ನೈ: ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಬಿಜೆಪಿಯ (BJP) ತಮಿಳುನಾಡು (Tamil Nadu) ಘಟಕ ಪಕ್ಷಕ್ಕಾಗಿ ರಾಜ್ಯದಲ್ಲಿ ಟಿವಿ ಚಾನಲ್‌ ಆರಂಭಿಸಲು ಯೋಜಿಸಿದೆ. ಕೇರಳದಲ್ಲಿ ಬಿಜೆಪಿಯ ಮುಖವಾಣಿಯಾಗಿರುವ ಜನಮ್‌ ಟಿವಿಯ ವಿಸ್ತರಣೆ ಇದಾಗಲಿದೆ ಎಂದು ಹೇಳಲಾಗಿದೆ.

ಬಿಜೆಪಿಯ ನೂತನ ತಮಿಳು ಟಿವಿ ವಾಹಿನಿಯ ಹೆಸರು ಕೂಡ ಜನಮ್‌ ಟಿವಿ ಆಗಲಿದ್ದು ನಗರದ ಆಳ್ವಾರ್‌ಪೇಟ್‌ ಪ್ರದೇಶದಿಂದ ಅದು ಕಾರ್ಯಾಚರಿಸಲಿದೆ. ಈ ವಾಹಿನಿ ಆರಂಭಕ್ಕೆ ಪಕ್ಷ ಸುಮಾರು ರೂ. 15 ಕೋಟಿ ಖರ್ಚಾಗಲಿದ್ದು ಪಕ್ಷ ಹಾಗೂ ಆರೆಸ್ಸೆಸ್‌ (RSS) ಸಂಪನ್ಮೂಲಗಳಿಂದ ಈ ನಿಧಿಯನ್ನು ಕ್ರೋಢೀಕರಿಸಲಾಗುವುದು ಎಂದು ಪಕ್ಷದ ನಾಯಕರು ಮಾಹಿತಿ ನೀಡಿದ್ದಾರೆ ಎಂದು indianexpress.com ವರದಿ ಮಾಡಿದೆ.

ಈ ಟಿವಿ ವಾಹಿನಿ ರಾಜ್ಯ ಬಿಜೆಪಿ ಅಧ್ಯಕ್ಷರಾಗಿರುವ "ಕೆ ಅಣ್ಣಾನಲೈ ಅವರ ಕೂಸು" ಎಂದು ಬಿಜೆಪಿ ನಾಯಕರೊಬ್ಬರು ಬಣ್ಣಿಸಿದ್ದಾರೆ, ಅಣ್ಣಾಮಲೈ ಅವರೇ ಈ ವಾಹಿನಿಯನ್ನು ನೋಡಿಕೊಳ್ಳಲಿದ್ದಾರೆಂಬ ಮಾಹಿತಿಯಿದೆ. ಎಪ್ರಿಲ್‌ 14, 2023 ರಿಂದ ಆರಂಭಗೊಳ್ಳಲಿರುವೆ ಅಣ್ಣಾಮಲೈ ಅವರ ರಾಜ್ಯವ್ಯಾಪಿ ಪಾದಯಾತ್ರೆಗೆ ವಿಸ್ತೃತ ಪ್ರಚಾರ ಒದಗಿಸುವ ಉದ್ದೇಶದಿಂದ ಈ ವಾಹಿನಿ ಆರಂಭಿಸಲಾಗುತ್ತಿದೆ ಎಂದು ತಿಳಿದು ಬಂದಿದೆ.

ಕಡಿಮೆ ವೇತನ ನೀಡುತ್ತಿದೆ ಸಹಿತ ಇತರ ಆರೋಪಗಳನ್ನು ಜನಮ್‌ ಟಿವಿ ಕೇರಳದಲ್ಲಿ ಎದುರಿಸುತ್ತಿದೆಯಾದರೂ ಶಬರಿಮಲೆ ವಿವಾದದ ಸಂದರ್ಭ ಬಿಜೆಪಿ ಮತ್ತು ಆರೆಸ್ಸೆಸ್‌ಗೆ ಈ ವಾಹಿನಿ ಅನುಕೂಲಕರವಾಗಿತ್ತು.

ಇದನ್ನೂ ಓದಿ: ಆರೆಸ್ಸೆಸ್ ಕೇಂದ್ರ ಕಚೇರಿಗೆ ಭೇಟಿ ನೀಡಿದ ಮಾಜಿ WWE ಸ್ಟಾರ್ ಗ್ರೇಟ್ ಖಲಿ

Similar News