ಬಿಬಿಸಿ ಸಾಕ್ಷ್ಯಚಿತ್ರ ರಾಷ್ಟ್ರೀಯ ಭದ್ರತೆ, ಸಾರ್ವಭೌಮತ್ವದ ಮೇಲೆ ಪರಿಣಾಮ ಬೀರುವುದಿಲ್ಲ: ಶಶಿ ತರೂರ್

Update: 2023-01-25 08:04 GMT

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಹಾಗೂ 2002 ರ ಗುಜರಾತ್ ಗಲಭೆ ಕುರಿತ ವಿವಾದಾತ್ಮಕ ಬಿಬಿಸಿ ಸಾಕ್ಷ್ಯಚಿತ್ರದ ಕುರಿತು ಮಾತನಾಡಿದ ಕಾಂಗ್ರೆಸ್ ನ ತಿರುವನಂತಪುರಂ ಸಂಸದ ಶಶಿ ತರೂರ್(Shashi Tharoor ), "ಇದು ಭಾರತದ ಸಾರ್ವಭೌಮತ್ವದ ಮೇಲೆ ಪರಿಣಾಮ ಬೀರುತ್ತದೆ ಎಂಬ ವಾದವು ಪರಿಣಾಮಕಾರಿಯಲ್ಲ. ಇದು ಭಾರತದ ರಾಷ್ಟ್ರೀಯ ಭದ್ರತೆ ಹಾಗೂ  ಸಾರ್ವಭೌಮತ್ವವನ್ನು ದುರ್ಬಲಗೊಳಿಸಿಲ್ಲ'' ಎಂದು ಅವರು ಹೇಳಿದರು.

ಬಿಬಿಸಿ ಸಾಕ್ಷ್ಯಚಿತ್ರದ ಕುರಿತು ಮಾತನಾಡಿದ ಶಶಿ ತರೂರ್, “ಅಭಿವ್ಯಕ್ತಿ ಸ್ವಾತಂತ್ರ್ಯದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಸರಕಾರ ಹೇಳಿದ್ದಕ್ಕೆ ನನಗೆ ಸಂತೋಷವಾಗಿದೆ. ಕೇರಳದ ಯುವ ಸಂಘಟನೆಯು ಸೆನ್ಸಾರ್‌ಶಿಪ್ ವಿರುದ್ಧ ಪ್ರತಿಭಟನೆಯಾಗಿ ಸಾಕ್ಷ್ಯಚಿತ್ರದ ಪ್ರದರ್ಶನವನ್ನು ಆಯೋಜಿಸಿದೆ, ನಾನು ಕೂಡ ಅದರ ಪರವಾಗಿದ್ದೆ’’ ಎಂದರು.

“ಇದು ಭಾರತದ ಸಾರ್ವಭೌಮತ್ವದ ಮೇಲೆ ಪರಿಣಾಮ ಬೀರುತ್ತದೆ ಎಂಬ ವಾದ ಪರಿಣಾಮಕಾರಿಯಾಗಿಲ್ಲ.  ಅದು ಏನನ್ನೂ ದುರ್ಬಲಗೊಳಿಸಿಲ್ಲ. ನಮ್ಮ ರಾಷ್ಟ್ರೀಯ ಭದ್ರತೆ ಹಾಗೂ  ಸಾರ್ವಭೌಮತ್ವದ ಮೇಲೆ  ಸಾಕ್ಷ್ಯಚಿತ್ರವೊಂದು   ಅಷ್ಟು ಸುಲಭವಾಗಿ ಪರಿಣಾಮ ಬೀರದು. ನಮ್ಮದು ಬಲಿಷ್ಠ ದೇಶ” ಎಂದರು.

Similar News