ಚೀನಾ ಬೇಹುಗಾರಿಕೆ ಬಲೂನ್ ಹೊಡೆದುರುಳಿಸಿದ ಅಮೆರಿಕ

Update: 2023-02-05 03:07 GMT

ವಾಷಿಂಗ್ಟನ್: ಅಮೆರಿಕ ವಾಯುಪ್ರದೇಶದಲ್ಲಿ ಸಂಚರಿಸಿದ ಚೀನಾ ಬೇಹುಗಾರಿಕೆ ಬಲೂನನ್ನು ತಕ್ಷಣ ಹೊಡೆದುರುಳಿಸುವಂತೆ ಅಮೆರಿಕದ ಅಧ್ಯಕ್ಷ ಜೋ ಬೈಡೇನ್ ಪೆಂಟಗಾನ್‌ಗೆ ಸೂಚನೆ ನೀಡಿದ್ದಾರೆ. ಅಧಿಕಾರಿಗಳು ಬಲೂನ್ ವಿಚಾರವನ್ನು ಹೇಳಿದ ತಕ್ಷಣ ಅದನ್ನು ಹೊಡೆದುರುಳಿಸುವಂತೆ ಬೈಡೇನ್ ಆದೇಶ ನೀಡಿದರು.

ಅಮೆರಿಕದ ಯುದ್ಧ ವಿಮಾನ ಚೀನಾದ ಬಲೂನನ್ನು ದಕ್ಷಿಣ ಕ್ಯಾಲಿಫೋರ್ನಿಯಾ ಕಡಲ ತೀರದಲ್ಲಿ ಹೊಡೆದುರುಳಿಸಿದೆ. ಚೀನಾದ ಬಲೂನ್ ಅಮೆರಿಕದ ಸಾರ್ವಭೌಮತ್ವದ "ಸ್ವೀಕಾರಾರ್ಹವಲ್ಲದ ಉಲ್ಲಂಘನೆ" ಎಂದು ಸೇನೆ ಬಣ್ಣಿಸಿದೆ.

"ಬುಧವಾರ ಈ ಬಲೂನ್ ಬಗ್ಗೆ ಮಾಹಿತಿ ಬಂದ ತಕ್ಷಣ ಇದನ್ನು ಹೊಡೆದುರುಳಿಸುವಂತೆ ಪೆಂಟಗಾನ್‌ಗೆ ಆದೇಶ ನೀಡಿದ್ದೆ. ತಳಮಟ್ಟದಲ್ಲಿ ಯಾರಿಗೂ ಹಾನಿಯಾಗದಂತೆ ಈ ಕಾರ್ಯ ನಿರ್ವಹಿಸಲು ಸೇನೆ ನಿರ್ಧರಿಸಿತ್ತು. ನೀರಿನ ಮೇಲೆ ಅಗಸದಲ್ಲಿ ಸಂಚರಿಸುವ ವೇಳೆ 12 ಮೈಲು ಪರಿದಿಯ ಒಳಗೆ ಹೊಡೆದುರುಳಿಸಲು ನಿರ್ಧರಿಸಿದರು" ಎಂದು ಬೈಡೇನ್ ಹೇಳಿದ್ದಾರೆ.

ಅವರು ಯಶಸ್ವಿಯಾಗಿ ಅದನ್ನು ಉರುಳಿಸಿದರು. ಇದನ್ನು ನಿರ್ವಹಿಸಿದ ವಿಮಾನ ಚಾಲಕರನ್ನು ನಾನು ಶ್ಲಾಘಿಸುತ್ತೇನೆ. ಸ್ವಲ್ಪ ಸಮಯದಲ್ಲೇ ಈ ಬಗ್ಗೆ ಮತ್ತಷ್ಟು ವಿವರ ನೀಡಲಿದ್ದೇನೆ" ಎಂದು ಸ್ಪಷ್ಟಪಡಿಸಿದರು.

ಅಮೆರಿಕದ ಕ್ರಮದ ವಿರುದ್ಧ ಚೀನಾ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಈ ಘಟನೆಗೆ ಅಗತ್ಯ ಪ್ರತಿಕ್ರಿಯಿಸುವ ಹಕ್ಕು ತನಗಿದೆ ಎಂದು ಹೇಳಿಕೊಂಡಿದೆ.

Similar News