ಆಸ್ಟ್ರೇಲಿಯ ವಿರುದ್ಧ ಮೊದಲ ಟೆಸ್ಟ್: ರೋಹಿತ್ ಶರ್ಮಾ 9ನೇ ಶತಕ

Update: 2023-02-10 07:54 GMT

ನಾಗ್ಪುರ, ಫೆ.10: ಭಾರತದ ನಾಯಕ ಹಾಗೂ ಆರಂಭಿಕ ಬ್ಯಾಟರ್ ರೋಹಿತ್ ಶರ್ಮಾ ಆಸ್ಟ್ರೇಲಿಯ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸಿ ಗಮನ ಸೆಳೆದರು.

ಎರಡನೇ ದಿನದಾಟವಾದ ಶುಕ್ರವಾರ ಸ್ಪಿನ್ನರ್ ಮುರ್ಫಿ ಎಸೆತವನ್ನು ಬೌಂಡರಿಗೆ ಅಟ್ಟಿದ ರೋಹಿತ್  171 ಎಸೆತಗಳಲ್ಲಿ 9ನೇ ಶತಕ ಪೂರೈಸಿದರು. ಮುಂಬೈ ಬ್ಯಾಟರ್ ರೋಹಿತ್ ಇನಿಂಗ್ಸ್ ನಲ್ಲಿ 14 ಬೌಂಡರಿ ಹಾಗೂ 2 ಸಿಕ್ಸರ್ ಗಳಿದ್ದವು.

ಭಾರತವು ರೋಹಿತ್ ಏಕಾಂಗಿ ಹೋರಾಟದ ನೆರವಿನಿಂದ 64 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 182 ರನ್ ಗಳಿಸಿದೆ.  ಆಸೀಸ್ ಪರ ಟಾಡ್ ಮುರ್ಫಿ(4-49)ಯಶಸ್ವಿ ಪ್ರದರ್ಶನ ನೀಡಿದ್ದಾರೆ.

Similar News