ಮೊದಲ ಟೆಸ್ಟ್: ಭಾರತ 400 ರನ್ ಗೆ ಆಲೌಟ್, ಇನಿಂಗ್ಸ್ ಮುನ್ನಡೆ
ಅಕ್ಷರ್ ಪಟೇಲ್ ಅರ್ಧಶತಕ, ಮುರ್ಫಿಗೆ 7 ವಿಕೆಟ್
Update: 2023-02-11 07:09 GMT
ನಾಗ್ಪುರ, ಫೆ.11: ಆಲ್ ರೌಂಡರ್ ಅಕ್ಷರ್ ಪಟೇಲ್ (Axar Patel) ಭರ್ಜರಿ ಅರ್ಧಶತಕದ ನೆರವಿನಿಂದ ಭಾರತ ತಂಡ ಮೊದಲ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ ಆಸ್ಟ್ರೇಲಿಯ ವಿರುದ್ದ ಬರೋಬ್ಬರಿ 400 ರನ್ ಗಳಿಸಿ ಆಲೌಟಾಗಿದೆ. 223 ರನ್ ಮೊದಲ ಇನಿಂಗ್ಸ್ ಪಡೆಯುವಲ್ಲಿ ಯಶಸ್ವಿಯಾಗಿದೆ.
ಶನಿವಾರ ಮೂರನೇ ದಿನದಾಟವನ್ನು ಆರಂಭಿಸಿದ ಭಾರತ ಭೋಜನವಿರಾಮಕ್ಕೆ ಮೊದಲು 139.3 ಓವರ್ ಗಳಲ್ಲಿ 400 ರನ್ ಗಳಿಸಿ ಆಲೌಟಾಗಿದೆ. ಪಟೇಲ್ 84 ರನ್(174 ಎಸೆತ, 10 ಬೌಂಡರಿ, 1 ಸಿಕ್ಸರ್)ಗಳಿಸಿ ಕಮಿನ್ಸ್ ಗೆ ಕ್ಲೀನ್ ಬೌಲ್ಡಾದರು. ಪಟೇಲ್ ಔಟಾಗುವುದರೊಂದಿಗೆ ಭಾರತದ ಇನಿಂಗ್ಸ್ ಅಂತ್ಯವಾಯಿತು.
ಬಾಲಂಗೋಚಿ ಮುಹಮ್ಮದ್ ಶಮಿ 37 ರನ್(47 ಎಸೆತ)ಗಳಿಸಿ ಗಮನ ಸೆಳೆದರು. ರವೀಂದ್ರ ಜಡೇಜ ಇಂದು 70 ರನ್ ಗಳಿಸಿ ಔಟಾದರು.
ಆಸ್ಟ್ರೇಲಿಯದ ಪರ ಸ್ಪಿನ್ನರ್ ಮುರ್ಫಿ 124 ರನ್ ಗೆ 7 ವಿಕೆಟ್ ಗಳನ್ನು ಪಡೆದರು. ನಾಯಕ ಕಮಿನ್ಸ್ 2 ವಿಕೆಟ್ ಪಡೆದರು.