ಫ್ರೆಂಡ್ಸ್ ತೌಡುಗೋಳಿ ಕ್ರಿಕೆಟ್ ಪ್ರೀಮಿಯರ್ ಲೀಗ್ : ಯಂಗ್ ಫ್ರೆಂಡ್ಸ್ ಅಬುಧಾಬಿ ತಂಡ ಚಾಂಪಿಯನ್
Update: 2023-02-21 18:28 GMT
ನರಿಂಗಾನ, ಫೆ. 21: ಫ್ರೆಂಡ್ಸ್ ತೌಡುಗೋಳಿ ಇದರ ಆಶ್ರಯದಲ್ಲಿ 7 ತಂಡಗಳ ಸೀಸನ್ 3 ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟ ವು ಇತ್ತೀಚೆಗೆ ತೌಡುಗೋಳಿ ಶಾಲಾ ಮೈದಾನದಲ್ಲಿ ನಡೆಯಿತು. ಪಂದ್ಯಾಟವನ್ನು ಮುಡೂರ್ ತೋಕೆ ಶಾಲಾ ವ್ಯವಸ್ಥಾಪಕ ದೇವಪ್ಪ ಶೆಟ್ಟಿ ಉದ್ಘಾಟಿಸಿದರು.
ಟಿ.ಎಮ್ ಮೂಸ ಕುಂಞಿ, ಸಂತೋಷ್ ಕುಮಾರ್ ರೈ ಬೋಳಿಯಾರ್, ರಿಯಾಝ್ ಫರಂಗಿಪೇಟೆ, ಸತೀಶ್ ಕುಂಪಲ, ಜಗದೀಶ್ ಆಳ್ವ ಕುವಟಬೈಲ್, ಅಬ್ಬು ಕಲ್ಲರಬೆ, ಜಯಪ್ರಕಾಶ್ ಶೆಟ್ಟಿ, ನವೀನ್ ಮಂಗಳಪಾಡಿ, ಹಮೀದ್ ಸಾಲುಗೋಳಿ, ಶೇಕಬ್ಬ, ಉದಯ ಶಂಕರ್ ಬಲೆತ್ತೋಡು ಅತಿಥಿಗಳಾಗಿ ಭಾಗವಹಿಸಿದ್ದರು.
ಈ ಪಂದ್ಯಾವಳಿಯಲ್ಲಿ ಯಂಗ್ ಫ್ರೆಂಡ್ಸ್ ಅಬುಧಾಬಿ ತಂಡವು ಚಾಂಪಿಯನ್ ಆದರೆ, ಚಾಲೆಂಜಿಂಗ್ ಸ್ಟಾರ್ ತಂಡ ದ್ವಿತೀಯ ಸ್ಥಾನ ಗಳಿಸಿತು. ಚಾಲೆಂಜಿಂಗ್ ಸ್ಟಾರ್ ತಂಡದ ಜೈಚು ಕೆದುಂಬಾಡಿ ಉತ್ತಮ ಬ್ಯಾಟರ್ ಹಾಗೂ ಎನ್ಎಫ್ಸಿ ನಿಡ್ಮಾಡ್ ತಂಡದ ನೌಫಲ್ ಕಲ್ಮಿಂಜ ಆಲ್ ರೌಂಡರ್ ಪ್ರಶಸ್ತಿಯನ್ನು ಮತ್ತು ಯಂಗ್ ಫ್ರೆಂಡ್ಸ್ ಅಬುಧಾಬಿ ತಂಡದ ಝೈನುದ್ದೀನ್ ಸಜಿಪ ಉತ್ತಮ ಬೌಲರ್ ಪ್ರಶಸ್ತಿಗೆ ಪಾತ್ರರಾದರು.