ನಾಲ್ಕು ಹೈಕೋರ್ಟ್‍ಗಳಿಗೆ 20 ಹೆಚ್ಚುವರಿ ನ್ಯಾಯಮೂರ್ತಿಗಳ ನೇಮಕ
Update: 2023-03-04 02:00 GMT
ಹೊಸದಿಲ್ಲಿ: ದೇಶದ ನಾಲ್ಕು ಹೈಕೋರ್ಟ್‍ಗಳ ಕಾಯಂ ನ್ಯಾಯಮೂರ್ತಿಗಳ ಹುದ್ದೆಗೆ 20 ಮಂದಿ ಹೆಚ್ಚುವರಿ ನ್ಯಾಯಮೂರ್ತಿಗಳನ್ನು ನೇಮಕ ಮಾಡಿ ಕೇಂದ್ರ ಕಾನೂನು ಸಚಿವಾಲಯದ ಅಧಿಸೂಚನೆ ಹೊರಡಿಸಿದೆ.
ಹೆಚ್ಚುವರಿ ನ್ಯಾಯಮೂರ್ತಿಗಳಿಗೆ ಸಾಮಾನ್ಯವಾಗಿ ಆರಂಭಿಕ ನೇಮಕಾತಿಯ ಎರಡು ವರ್ಷಗಳ ಬಳಿಕ ಕಾಯಂ ನ್ಯಾಯಮೂರ್ತಿಗಳಾಗಿ ಪದೋನ್ನತಿ ನೀಡಲಾಗುತ್ತದೆ.
ಅಲಹಾಬಾದ್ ಹೈಕೋರ್ಟ್‍ಗೆ 12 ಮಂದಿ, ಮುಂಬೈ ಹೈಕೋಟಗೆ ಇಬ್ಬರು, ದೆಹಲಿ ಹಾಗೂ ಮದ್ರಾಸ್ ಹೈಕೋರ್ಟ್‍ಗೆ ತಲಾ ಮೂವರು ಹೆಚ್ಚುವರಿ ನ್ಯಾಯಮೂರ್ತಿಗಳನ್ನು ನೇಮಿಸಲಾಗಿದೆ.
ದೇಶದ 25 ಹೈಕೋರ್ಟ್‍ಗಳಲ್ಲಿ 333 ನ್ಯಾಯಮೂರ್ತಿ ಹುದ್ದೆಗಳು ಖಾಲಿ ಇವೆ. ಮಾರ್ಚ್ 1ರ ತನಕ 1114 ಮಂಜೂರಾದ ಹುದ್ದೆಗಳಿದ್ದು, ಅಲಹಾಬಾದ್ ಹೈಕೋರ್ಟ್‍ನಲ್ಲಿ ಗರಿಷ್ಠ ಎಂದರೆ 57 ಖಾಲಿ ಹುದ್ದೆಗಳಿವೆ. ಉಳಿದಂತೆ ಮುಂಬೈ (28), ಗುಜರಾತ್ (28), ಮಧ್ಯಪ್ರದೇಶ (22)ಮತ್ತು ಪಾಟ್ನಾದಲ್ಲಿ (21) ಗರಿಷ್ಠ ಖಾಲಿ ಹುದ್ದೆಗಳಿವೆ.