WPL: ಉದ್ಘಾಟನಾ ಪಂದ್ಯದಲ್ಲಿ ಗುಜರಾತ್ ವಿರುದ್ಧ ಮುಂಬೈಗೆ 143 ರನ್‌ ಗಳ ಭರ್ಜರಿ ಜಯ

Update: 2023-03-04 18:03 GMT

ನವಿ ಮುಂಬೈ, ಮಾ.4: ನಾಯಕಿ ಹರ್ಮನ್‌ಪ್ರೀತ್ ಕೌರ್ ಅರ್ಧಶತಕ(65 ರನ್, 30 ಎಸೆತ, 14 ಬೌಂಡರಿ)ಹಾಗೂ ಬೌಲರ್‌ಗಳ ಉತ್ತಮ ಬೌಲಿಂಗ್ ಬಲದಿಂದ ಮುಂಬೈ ಇಂಡಿಯನ್ಸ್ ತಂಡ ಶನಿವಾರ ಇಲ್ಲಿ ಆರಂಭವಾದ ಮೊದಲ ಆವೃತ್ತಿಯ ಮಹಿಳೆಯರ ಪ್ರೀಮಿಯರ್ ಲೀಗ್‌ನ ಉದ್ಘಾಟನಾ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧ 143 ರನ್‌ನಿಂದ ಭರ್ಜರಿ ಜಯ ದಾಖಲಿಸಿದೆ.

 ಡಿ.ವೈ .ಪಾಟೀಲ್ ಸ್ಟೇಡಿಯಮ್‌ನಲ್ಲಿ ನಡೆದ ಪಂದ್ಯದಲ್ಲಿ ಗೆಲ್ಲಲು 208 ರನ್ ಗುರಿ ಪಡೆದಿದ್ದ ಗುಜರಾತ್ 15.1 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 64 ರನ್ ಗಳಿಸಿ ಸೋಲೊಪ್ಪಿಕೊಂಡಿತು. ನಾಯಕಿ ಬೆತ್‌ಮೂನಿ ಗಾಯಗೊಂಡು ನಿವೃತ್ತಿಯಾದರು.

 ಮುಂಬೈ ಪರ ಸೈಕಾ ಇಶಾಖ್(4-11) ಯಶಸ್ವಿ ಬೌಲರ್ ಎನಿಸಿಕೊಂಡರು. ದಯಾಳನ್ ಹೇಮಲತಾ(29 ರನ್)ಗರಿಷ್ಠ ಸ್ಕೋರ್ ಗಳಿಸಿದರು.

ಇದಕ್ಕೂ ಮೊದಲು ಕೇವಲ 22 ಎಸೆತಗಳಲ್ಲಿ 50 ರನ್ ಸಿಡಿಸಿದ ಕೌರ್ ಟೂರ್ನಿಯಲ್ಲಿ ಅರ್ಧಶತಕ ಸಿಡಿಸಿದ ಮೊದಲ ಬ್ಯಾಟರ್ ಎನಿಸಿಕೊಂಡರು. ಕೌರ್ 216.67ರ ಸ್ಟ್ರೈಕ್‌ರೇಟ್‌ನಲ್ಲಿ 14 ಬೌಂಡರಿಗಳನ್ನು ಗಳಿಸಿದ್ದಾರೆ.

ಕಿವೀಸ್ ಬ್ಯಾಟರ್ ಅಮೆಲಿಯಾ ಕೆರ್ರ್‌ 24 ಎಸೆತಗಳಲ್ಲಿ ಔಟಾಗದೆ 45 ರನ್ ಗಳಿಸಿ ಕೌರ್‌ಗೆ ಉತ್ತಮ ಸಾಥ್ ನೀಡಿದರು. ಓಪನರ್ ಹ್ಯಾಲಿ ಮ್ಯಾಥ್ಯೂಸ್ 37 ಎಸೆತಗಳಲ್ಲಿ 47 ರನ್ ಗಳಿಸಿದರು. ್‌‌..

Similar News