ವಿಮ್‌ನಿಂದ ಅಂತರ್‌ರಾಷ್ಟ್ರೀಯ ಮಹಿಳಾ ದಿನಾಚರಣೆ
Update: 2023-03-09 15:47 GMT
ಬೆಂಗಳೂರು: ವಿಮೆನ್ ಇಂಡಿಯಾ ಮೂವ್‌ಮೆಂಟ್ (ವಿಮ್) ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ವಿವಿಧ ಕಾರ್ಯಕ್ರಮಗಳನ್ನು ಬುಧವಾರ ನಡೆಸಲಾಯಿತು.
ಚಾಮರಾಜನಗರ, ಮೈಸೂರು, ಯಾದಗಿರಿ, ಉಡುಪಿ, ಮಂಗಳೂರು, ಪುತ್ತೂರು, ಮುಲ್ಕಿ-ಮೂಡುಬಿದಿರೆ, ಉಳ್ಳಾಲದಲ್ಲಿ ನಡೆಸಲಾದ ಕಾರ್ಯಕ್ರಮದಲ್ಲಿ ಆಹಾರ ಕಿಟ್, ಹೊಲಿಗೆ ಯಂತ್ರ ವಿತರಣೆ, ಹಣ್ಣ ಹಂಪಲು ವಿತರಣೆ, ಸ್ನೇಹ ಸಮ್ಮಿಲನ, ಸಾಧಕರಿಗೆ ಸನ್ಮಾನ, ವೃದ್ದಾಶ್ರಮಕ್ಕೆ ಭೇಟಿ, ವಿಕಲಚೇತನ ಮಕ್ಕಳ ಭೇಟಿ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ನಡೆಸಲಾಯಿತು.
ವಿಮ್ ರಾಜ್ಯಾಧ್ಯಕ್ಷೆ ಫಾತಿಮಾ ನಸೀಮಾ, ಪ್ರಧಾನ ಕಾರ್ಯದರ್ಶಿ ನಸ್ರಿಯಾ ಬೆಳ್ಳಾರೆ ಹಾಗೂ ಆಯಾ ಜಿಲ್ಲೆಯ ಪದಾಧಿಕಾರಿಗಳು, ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.