ರಮಝಾನ್ ತಿಂಗಳಲ್ಲಿ ಒಂದು ಗಂಟೆ ಮುಂಚಿತವಾಗಿ ಕೆಲಸ ತೊರೆಯಲು ಮುಸ್ಲಿಂ ಉದ್ಯೋಗಿಗಳಿಗೆ ಅನುಮತಿ ನೀಡಿದ ಬಿಹಾರ ಸರ್ಕಾರ

Update: 2023-03-18 06:35 GMT

ಪಾಟ್ನಾ: ಮುಸ್ಲಿಂ ಉದ್ಯೋಗಿಗಳಿಗೆ ರಮಝಾನ್ ತಿಂಗಳಲ್ಲಿ ಕಚೇರಿಗೆ ನಿಗದಿತ ಅವಧಿಗಿಂತ ಒಂದು ಗಂಟೆ ತಡವಾಗಿ ಬರಲು ಹಾಗೂ ನಿಗದಿತ ಅವಧಿಗಿಂತ ಒಂದು ಗಂಟೆ ಮುಂಚಿತವಾಗಿ ಕಚೇರಿ ತೊರೆಯಲು ಬಿಹಾರ ಸರ್ಕಾರ ಅನುಮತಿ ನೀಡಿದೆ.

ಈ ಅನುಮತಿಯನ್ನು ರಮಝಾನ್ ತಿಂಗಳಲ್ಲಿ ಉಪವಾಸ ನಡೆಸುವುದರಿಂದ ನೀಡಲಾಗಿದೆ ಎಂದು ರಾಜ್ಯ ಸಾಮಾನ್ಯ ಆಡಳಿತ ಇಲಾಖೆಯು ಶುಕ್ರವಾರ ಅಧಿಸೂಚನೆ ಹೊರಡಿಸಿದೆ.

Similar News