ಭಾರತದಲ್ಲಿ ದೈನಂದಿನ ಕೋವಿಡ್ ಪ್ರಕರಣ 800ಕ್ಕೂ ಅಧಿಕ; 4 ತಿಂಗಳುಗಳಲ್ಲಿ ಅತಿ ಹೆಚ್ಚು
Update: 2023-03-18 08:00 GMT
ಹೊಸದಿಲ್ಲಿ: ಕಳೆದ 24 ಗಂಟೆಗಳಲ್ಲಿ 800 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುವ ಮೂಲಕ ಭಾರತದಲ್ಲಿ ದೈನಂದಿನ ಕೋವಿಡ್ ಪ್ರಕರಣಗಳು ನಾಲ್ಕು ತಿಂಗಳುಗಳಲ್ಲಿ ಮೊದಲ ಬಾರಿ ಗರಿಷ್ಠ ಸಂಖ್ಯೆಯಲ್ಲಿ ಕಂಡುಬಂದಿದೆ ಎಂದು NDTV ವರದಿ ಮಾಡಿದೆ.
ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ-ಅಂಶಗಳ ಪ್ರಕಾರ, 841 ತಾಜಾ ಸೋಂಕುಗಳೊಂದಿಗೆ, ಸಕ್ರಿಯ ಪ್ರಕರಣ ಈಗ 5,389 ಕ್ಕೆ ಏರಿದೆ.
ಜಾರ್ಖಂಡ್ ಹಾಗೂ ಮಹಾರಾಷ್ಟ್ರದಲ್ಲಿ ತಲಾ ಒಂದು ಸಾವು ವರದಿ ವರದಿಯಾದರೆ, ಕೇರಳದಲ್ಲಿ 2 ಪ್ರಕರಣ ವರದಿಯಾಗಿದೆ.
ಕೇರಳ, ಮಹಾರಾಷ್ಟ್ರ, ಕರ್ನಾಟಕ ಹಾಗೂ ಗುಜರಾತ್‌ನಲ್ಲಿ ಅತಿ ಹೆಚ್ಚು ವೈರಲ್ ಸೋಂಕು ಪ್ರಕರಣಗಳಿವೆ ಎಂದು ಅಂಕಿ-ಅಂಶಗಳು ತೋರಿಸಿವೆ.
ಭಾರತದ ದೈನಂದಿನ ಸರಾಸರಿ ಹೊಸ ಕೋವಿಡ್ ಪ್ರಕರಣಗಳು ತಿಂಗಳಿಗೆ ಆರು ಪಟ್ಟು ಹೆಚ್ಚುತ್ತಿವೆ. ಒಂದು ತಿಂಗಳ ಹಿಂದೆ (ಫೆ 18) 112 ರಷ್ಟಿದ್ದ ದೈನಂದಿನ ಸರಾಸರಿ ಹೊಸ ಪ್ರಕರಣಗಳು ಈಗ (ಮಾರ್ಚ್ 18) 626 ಆಗಿದೆ.