ಅದಾನಿ ಸಮೂಹದಲ್ಲಿ ಬಿರುಗಾಳಿ ಎಬ್ಬಿಸಿದ ಬಳಿಕ ಶೀಘ್ರದಲ್ಲಿ ಮತ್ತೊಂದು ವರದಿ ಪ್ರಕಟಿಸುವುದಾಗಿ ಹೇಳಿದ ಹಿಂಡೆನ್ ಬರ್ಗ್
ಹೊಸದಿಲ್ಲಿ: ಭಾರತದ ಅದಾನಿ (Adani) ಸಮೂಹ ಸಂಸ್ಥೆಗಳು ವ್ಯಾಪಕ ಅವ್ಯವಹಾರಗಳನ್ನು ನಡೆಸಿದೆ ಎಂಬ ಆರೋಪ ಹೊರಿಸಿ ಜನವರಿಯಲ್ಲಿ ಸ್ಫೋಟಕ ವರದಿ ಹೊರತಂದಿದ್ದ ಅಮೆರಿಕಾದ ಹಿಂಡೆನ್‌ಬರ್ಗ್ ರಿಸರ್ಚ್ (Hindenburg Research) ಸಂಸ್ಥೆ ತಾನು ಸದ್ಯದಲ್ಲಿಯೇ ಇನ್ನೊಂದು ದೊಡ್ಡ ವರದಿ ಹೊರತರುವುದಾಗಿ ಹೇಳಿದೆ.
"ಹೊಸ ವರದಿ ಶೀಘ್ರದಲ್ಲಿ….ಇನ್ನೊಂದು ದೊಡ್ಡ ವರದಿ," ಎಂದು ಹಿಂಡೆನ್‌ಬರ್ಗ್ ರಿಸರ್ಚ್ ಇಂದು ಟ್ವೀಟ್ ಮಾಡಿದೆ. ಸಂಸ್ಥೆ ಹೆಚ್ಚಿನ ಮಾಹಿತಿ ನೀಡದೇ ಇರುವುದರಿಂದ ಈ ಕುರಿತು ಭಾರೀ ಕುತೂಹಲ ಮೂಡಿದೆ.
ಜನವರಿಯಲ್ಲಿ ಹೊರತರಲಾದ ಹಿಂಡೆನ್‌ಬರ್ಗ್ ವರದಿಯಲ್ಲಿ ಷೇರು ಬೆಲೆ ತಿರುಚುವಿಕೆಯ ಆರೋಪಗಳ ಹಿನ್ನೆಲೆಯಲ್ಲಿ ಅದಾನಿ ಸಮೂಹದ ಹಲವು ಸಂಸ್ಥೆಗಳ ಷೇರುಗಳ ಬೆಲೆಗಳಲ್ಲಿ ಭಾರೀ ಏರಿಳಿತ ಕಂಡುಬಂದು ಸಂಸ್ಥೆಯ ಮುಖ್ಯಸ್ಥ ಗೌತಮ್ ಅದಾನಿ ಅವರ ಒಟ್ಟು ಸಂಪತ್ತಿನ ಮೌಲ್ಯವೂ ಕುಸಿತ ಕಂಡಿತ್ತು.
ಈ ಆರೋಪಿತ ಅವ್ಯವಹಾರಗಳ ಕುರಿತು ಜಂಟಿ ಸಂಸದೀಯ ಸಮಿತಿಯಿಂದ ತನಿಖೆ ನಡೆಸಬೇಕೆಂದು ವಿಪಕ್ಷಗಳು ಪಟ್ಟು ಹಿಡಿದಿವೆ.
ಇದನ್ನೂ ಓದಿ: ಮಗನ ನೆನಪುಗಳನ್ನು ಜೀವಂತವಾಗಿರಿಸಲು ಸಮಾಧಿ ಮೇಲೆ QR ಕೋಡ್ ಅಳವಡಿಸಿದ ಪೋಷಕರು!
New report soon—another big one.
— Hindenburg Research (@HindenburgRes) March 22, 2023