ಉಳ್ಳಾಲ: ಯುವಕ ಆತ್ಮಹತ್ಯೆ
ಉಳ್ಳಾಲ, ಮಾ.25: ಯುವಕನೋರ್ವ ಮನೆಯ ಕಿಟಕಿಗೆ ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ಕುಂಪಲ ಮೂರುಕಟ್ಟೆ ಎಂಬಲ್ಲಿ ಶನಿವಾರ ಬೆಳಗ್ಗೆ ವರದಿಯಾಗಿದೆ.
ಕುಂಪಲ ಮೂರುಕಟ್ಟೆ ನಿವಾಸಿ ಅಕ್ಷಯ್ (25) ಆತ್ಮಹತ್ಯೆಗೈದ ಯುವಕ ಎಂದು ತಿಳಿದು ಬಂದಿದೆ.
ಅಕ್ಷಯ್ ತೊಕ್ಕೊಟ್ಟಿನ ಮೊಬೈಲ್ ಅಂಗಡಿಯೊಂದರಲ್ಲಿ ಕೆಲಸಕ್ಕಿದ್ದು, ಕಳೆದ 20 ದಿವಸಗಳಿಂದ ಕೆಲಸಕ್ಕೆ ತೆರಳದೇ ಮನೆಯಲ್ಲೇ ಉಳಿದಿದ್ದರು. ಮೊಬೈಲ್ ಅಂಗಡಿ ಮಾಲಕರು ಕರೆ ಮಾಡಿದರೂ ಅಕ್ಷಯ್ ಕರೆ ಸ್ವೀಕರಿಸುತ್ತಿರಲಿಲ್ಲ ಎಂದು ತಿಳಿದು ಬಂದಿದೆ.
ಇಂದು ಬೆಳಗ್ಗೆ ಅಕ್ಷಯ್ ತಾಯಿ ಮನೆ ಹತ್ತಿರದ ಅಂಗಡಿಗೆ ತೆರಳಿದ್ದ ವೇಳೆ ಅಕ್ಷಯ್ ಮನೆಯ ಕಿಟಕಿಗೆ ಬಟ್ಟೆಯಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆನ್ನಲಾಗಿದೆ.
ಖಿನ್ನತೆಯಿಂದ ಅಕ್ಷಯ್ ಆತ್ಮಹತ್ಯೆ ಮಾಡಿರುವುದಾಗಿ ಹೇಳಲಾಗುತ್ತಿದೆ. ಮೃತ ಅಕ್ಷಯ್ ತಾಯಿ, ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ. ಉಳ್ಳಾಲ ಪೊಲೀಸರು ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು, ಈ ಬಗ್ಗೆ ಪ್ರಕರಣ ದಾಖಲಿಸಿದ್ದಾರೆ.