ಜೋಸ್ ಅಲುಕ್ಕಾಸ್ ಪ್ಯಾನ್ ಇಂಡಿಯಾ ಬ್ರಾಂಡ್ ಅಂಬಾಸಿಡರ್ ಆಗಿ ನಟ ಆರ್. ಮಾಧವನ್ ನೇಮಕ
ಮುಂಬೈ: ದೇಶದ ಮುಂಚೂಣಿ ಆಭರಣ ಸಂಸ್ಥೆಯಾಗಿ ಬೆಳೆದಿರುವ ಜೋಸ್ ಅಲುಕ್ಕಾಸ್‌ನ ಭವಿಷ್ಯದ ಕಾರ್ಯಾಚರಣೆಗಳಿಗೆ ಪ್ಯಾನ್ ಇಂಡಿಯಾ ಬ್ರಾಂಡ್ ಅಂಬಾಸಿಡರ್ ಆಗಿ ಕೆಲಸ ಮಾಡಲು ದಕ್ಷಿಣ ಭಾರತದ ಪ್ರಸಿದ್ಧ ನಟ ಆರ್.ಮಾಧವನ್ ಈ ಸಂಸ್ಥೆಯ ಜತೆ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.
ಜನಪ್ರಿಯ ನಟಿ ಕೀರ್ತಿ ಸುರೇಶ್ ಅವರು ಈ ಪ್ರಮುಖ ಆಭರಣ ಸಮೂಹದ ಬ್ರಾಂಡ್ ಅಂಬಾಸಿಡರ್ ಆಗಿ ಮುಂದುವರಿಯಲಿದ್ದಾರೆ. ಇತ್ತೀಚೆಗೆ ಮುಂಬೈನಲ್ಲಿ ನಡೆದ ಸಮಾರಂಭದಲ್ಲಿ ಈ ಇಬ್ಬರೂ ಸಿನಿಮಾ ಕಲಾವಿದರು ಒಪ್ಪಂದಕ್ಕೆ ಜೋಸ್ ಅಲುಕ್ಕಾಸ್ ಜತೆ ಸಹಿ ಹಾಕಿದ್ದಾರೆ.
ಭಾರತದಾದ್ಯಂತ ನಮ್ಮ ಆಭರಣ ಸಮೂಹದ ಬ್ರಾಂಡ್ ಫಿಲಾಸಫಿಯನ್ನು ಪಸರಿಸುವ ಉದ್ದೇಶದಿಂದ
ಮಾಧವನ್ ಅವರನ್ನು ಪ್ಯಾನ್ ಇಂಡಿಯಾ ಬ್ರಾಂಡ್ ಅಂಬಾಸಿಡರ್ ಆಗಿ ಆಯ್ಕೆ ಮಾಡಲಾಗಿದೆ ಎಂದು ಜೋಸ್ ಅಲುಕ್ಕಾಸ್ ಮೂಲಗಳು ತಿಳಿಸಿವೆ.
ಜೋಸ್ ಅಲುಕ್ಕಾಸ್ ಭಾರತದಾದ್ಯಂತ ದೊಡ್ಡ ಮಟ್ಟದಲ್ಲಿ ವಿಸ್ತರಣೆ ಯೋಜನೆಗಳನ್ನು ಹೊಂದಿದೆ. ದಕ್ಷಿಣ ಭಾರತದ ನಟಿ ಕೀರ್ತಿ ಸುರೇಶ್ ಅವರು ಜೋಸ್ ಅಲುಕ್ಕಾಸ್‌ನ ಚಿನ್ನ ಮತ್ತು ವಜ್ರದ ಆಭರಣಗಳ ಬ್ರಾಂಡ್‍ಗಳನ್ನು ಪ್ರತಿನಿಧಿಸುವುದನ್ನು ಮುಂದುವರಿಸಲಿದ್ದಾರೆ ಎಂದು ಸಮೂಹದ ಅಧ್ಯಕ್ಷ ಜೋಸ್ ಅಲುಕ್ಕಾ ಹೇಳಿದರು.
ಕಳೆದ 58 ವರ್ಷಗಳಿಂದ ಬದ್ಧತೆಯ ಸಮರ್ಪಣೆ ಮತ್ತು ನೀತಿಗಳ ಬಲವಾದ ಸ್ತಂಭಗಳ ಮೇಲೆ ಕಾರ್ಯನಿರ್ವಹಿಸುತ್ತಿರುವ ಜೋಸ್ ಅಲುಕ್ಕಾಸ್ ಸಮೂಹದ ಭವಿಷ್ಯದ ಅಭಿಯಾನಗಳಿಗೆ ಇಬ್ಬರೂ ತಾರೆಯರು ತಮಗೆ ಸಿಕ್ಕಿರುವ ತಾರಾ ವರ್ಚಸ್ಸನ್ನು ಕೊಡುಗೆಯಾಗಿ ನೀಡುವ ನಿರೀಕ್ಷೆಯಿದೆ. ಜೋಸ್ ಅಲುಕ್ಕಾಸ್ ತಮಿಳುನಾಡು, ಆಂಧ್ರ ಪ್ರದೇಶ, ತೆಲಂಗಾಣ, ಕರ್ನಾಟಕ, ಕೇರಳ ಮತ್ತು ಪುದುಚೇರಿಯಲ್ಲಿ ಚಿನ್ನಾಭರಣಗಳ ವ್ಯವಹಾರವನ್ನು ನಿರಂತರವಾಗಿ ಮುನ್ನಡೆಸುತ್ತಿದೆ.
ಅಂಬಾಸಿಡರ್ ಆಗಿ ಕಾರ್ಯನಿರ್ವಹಿಸುವ ಅವಕಾಶ ಸಿಕ್ಕಿರುವ ಬಗ್ಗೆ ಪ್ರತಿಕ್ರಿಯಿಸಿದ ಆರ್. ಮಾಧವನ್ ಅವರು ವ್ಯವಹಾರದಲ್ಲಿ ಪ್ರಾಮಾಣಿಕತೆ ಪದಕ್ಕೆ ಸಮಾನಾರ್ಥಕವಾಗಿ ನಿಲ್ಲುವ ಬ್ರಾಂಡ್‍ನೊಂದಿಗೆ ಸಹಕರಿಸಲು ಸಂತೋಷವಾಗಿದೆ ಎಂದು ಹೇಳಿದರು.
"ಇಂದಿನ ಆಧುನಿಕ ಹೊಸ ಜಮಾನಾದಲ್ಲಿ ಹೆಚ್ಚುತ್ತಿರುವ ಮಹಿಳೆಯರ ವಿಭಿನ್ನ ವಿನ್ಯಾಸದ ಆಭರಣಗಳ ಬೇಡಿಕೆಗಳನ್ನು ಜೋಸ್ ಅಲುಕ್ಕಾಸ್ ಈಡೇರಿಸುತ್ತದೆ’’ ಎಂದು ನಟಿ ಕೀರ್ತಿ ಸುರೇಶ್ ನುಡಿದರು.
ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಜೋಸ್ ಅಲುಕ್ಕಾಸ್‍ನ ವ್ಯವಸ್ಥಾಪಕ ನಿರ್ದೇಶಕರಾದ ವರ್ಗೀಸ್ ಅಲುಕ್ಕಾ, ಪೌಲ್ ಜೆ ಅಲುಕ್ಕಾ ಮತ್ತು ಜಾನ್ ಅಲುಕ್ಕಾ ಅವರು ಈ ಒಪ್ಪಂದ ಪತ್ರವನ್ನು ಕಲಾವಿದರಿಬ್ಬರಿಗೆ ಹಸ್ತಾಂತರಿಸಿದರು.