ಕೇಂದ್ರ ಸಚಿವ ಜಿ. ಕಿಶನ್ ರೆಡ್ಡಿ ಆಸ್ಪತ್ರೆಗೆ ದಾಖಲು: ವರದಿ

Update: 2023-05-01 04:02 GMT

ಹೊಸದಿಲ್ಲಿ: ಕೇಂದ್ರ ಸಂಸ್ಕೃತಿ ಹಾಗೂ  ಪ್ರವಾಸೋದ್ಯಮ ಸಚಿವ ಜಿ. ಕಿಶನ್ ರೆಡ್ಡಿ ಅವರನ್ನು ರವಿವಾರ ಹೊಸದಿಲ್ಲಿಯ ಏಮ್ಸ್‌ಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಎದೆ ನೋವಿನ  ಹಿನ್ನೆಲೆಯಲ್ಲಿ ಅವರನ್ನು ರಾತ್ರಿ 10.50 ರ ಸುಮಾರಿಗೆ ಆಸ್ಪತ್ರೆಗೆ ಕರೆತರಲಾಯಿತು ಎಂದು ಮೂಲಗಳು ತಿಳಿಸಿವೆ.

ಕೇಂದ್ರ ಸಚಿವರನ್ನು ಕಾರ್ಡಿಯೋ ನ್ಯೂರೋ ಸೆಂಟರ್‌ನ ಕಾರ್ಡಿಯಾಕ್ ಕೇರ್ ಯೂನಿಟ್‌ನಲ್ಲಿ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

Similar News