ಮಾಜಿ ಕೇಂದ್ರ ಸಚಿವ, ಬಿಜೆಪಿ ಸಂಸದ ರತನ್ ಲಾಲ್ ನಿಧನ

Update: 2023-05-18 05:40 GMT

ಚಂಡೀಗಡ: ಮಾಜಿ ಕೇಂದ್ರ ಸಚಿವ ಹಾಗೂ  ಬಿಜೆಪಿಯ ಅಂಬಾಲಾ ಸಂಸದ ರತನ್ ಲಾಲ್ ಕಟಾರಿಯಾ ಗುರುವಾರ ನಿಧನರಾದರು. ಅವರಿಗೆ 71 ವರ್ಷ ವಯಸ್ಸಾಗಿತ್ತು

ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಹಾಗೂ  ಪಕ್ಷದ ರಾಜ್ಯ ಘಟಕದ ಅಧ್ಯಕ್ಷ  ಓಂ ಪ್ರಕಾಶ್ ಧಂಕರ್ ಸೇರಿದಂತೆ ಬಿಜೆಪಿಯ ಹಿರಿಯ ನಾಯಕರು ಕಟಾರಿಯಾ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಅನಾರೋಗ್ಯದ ನಂತರ ರತನ್  ಲಾಲ್ ಕಟಾರಿಯಾ ಅವರನ್ನು ಕಳೆದ ಒಂದು ತಿಂಗಳಿನಿಂದ ಇಲ್ಲಿನ ಪಿಜಿಐಎಂಇಆರ್ ನಲ್ಲಿ ದಾಖಲಿಸಲಾಗಿತ್ತು. ಅವರು ಬೆಳಿಗ್ಗೆ 3.30 ರ ಸುಮಾರಿಗೆ ನಿಧನರಾದರು ಎಂದು ಕಟಾರಿಯಾ ಅವರ ಆಪ್ತ  ಪಿಟಿಐಗೆ ತಿಳಿಸಿದರು.

ರತನ್ ಲಾಲ್ ಕಟಾರಿಯಾ ಅವರು  ಪತ್ನಿ, ಇಬ್ಬರು ಹೆಣ್ಣುಮಕ್ಕಳು ಹಾಗೂ  ಒಬ್ಬ ಮಗನನ್ನು ಅಗಲಿದ್ದಾರೆ.

Similar News