ಸಾಕು ನಾಯಿ ದಾಳಿಯಿಂದ ತಪ್ಪಿಸಿಕೊಳ್ಳಲು 3ನೇ ಮಹಡಿಯಿಂದ ಜಿಗಿದ ಡೆಲಿವರಿ ಬಾಯ್, ಪರಿಸ್ಥಿತಿ ಗಂಭೀರ

Update: 2023-05-23 08:14 GMT

ಹೈದರಾಬಾದ್‌:  ಡೆಲಿವರಿ ಬಾಯ್ ಒಬ್ಬರು ರವಿವಾರ ಮಧ್ಯಾಹ್ನ ಗ್ರಾಹಕರಿಗೆ ಸೇರಿದ ಸಾಕು ನಾಯಿಯ ದಾಳಿಯಿಂದ  ತನ್ನನ್ನು ರಕ್ಷಿಸಿಕೊಳ್ಳಲು ಪ್ರಯತ್ನಿಸುತ್ತಿರುವಾಗ ಅಪಾರ್ಟ್ಮೆಂಟ್ ಕಟ್ಟಡದ ಮೂರನೇ ಮಹಡಿಯಿಂದ ಬಿದ್ದು ಗಂಭೀರ ಗಾಯಗೊಂಡಿದ್ದಾರೆ.

ಈ ವರ್ಷದ ಜನವರಿಯಿಂದ ನಗರದಲ್ಲಿ ವರದಿಯಾದ ಎರಡನೇ ಘಟನೆ ಇದಾಗಿದೆ.

ಹೈದರಾಬಾದ್‌ನ ಪಂಚವಟಿ ಕಾಲೋನಿಯಲ್ಲಿರುವ ಶ್ರೀನಿಧಿ ಹೈಟ್ಸ್‌ ಅಪಾರ್ಟ್‌ಮೆಂಟ್‌ನಲ್ಲಿ ಈ ಘಟನೆ ನಡೆದಿದೆ. ಹಾಸಿಗೆ ವಿತರಿಸಲು ಹೋಗಿದ್ದ  ಡೆಲಿವರಿ ಬಾಯ್ ಮನೆ ಬಾಗಿಲು ಬಡಿದಾಗ  ಸಾಕುಪ್ರಾಣಿ ಡಾಬರ್‌ಮ್ಯಾನ್‌ ಅವರ ಮೇಲೆ ದಾಳಿ ಮಾಡಿದೆ.

 30 ವರ್ಷ ವಯಸ್ಸಿನ ಡೆಲಿವರಿ ಬಾಯ್ ಹಾಸಿಗೆ ವಿತರಿಸಲು ಮನೆಗೆ ಹೋಗಿದ್ದರು. ಹಾಗೂ  ಗ್ರಾಹಕರ ಮನೆ ಬಾಗಿಲಲ್ಲಿದ್ದ ನಾಯಿಯು ಬೊಗಳಲು ಆರಂಭಿಸಿತು, ಮನೆ ಬಾಗಿಲು ಭಾಗಶಃ ತೆರೆದಿತ್ತು ಎಂದು ವರದಿಯಾಗಿದೆ. ಬಾಗಿಲು ತೆರೆದಿದ್ದರಿಂದ ಡೋಬರ್‌ಮ್ಯಾನ್  ದಾಳಿ ಮಾಡಲು ಮುಂದಾದಾಗ  ಇಲ್ಯಾಸ್ ತನ್ನನ್ನು ನಾಯಿಯಿಂದ ರಕ್ಷಿಸಿಕೊಳ್ಳಲು ಪ್ಯಾರಪೆಟ್ ಗೋಡೆಯ ಮೇಲೆ ಹಾರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಗ್ರಾಹಕರು ಹಾಗೂ  ಇತರ ನಿವಾಸಿಗಳು ಆತನನ್ನು ರಕ್ಷಿಸಲು ಮುಂದಾದರು, ಆದರೆ ಇಲ್ಯಾಸ್ ಕಾಲು ಜಾರಿ ಬಿದ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಯುವಕನನ್ನು  ತಕ್ಷಣ ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ಸಾಗಿಸಲಾಯಿತು.

ರಾಯದುರ್ಗಂ ಪೊಲೀಸರು ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 289 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Similar News