ಗ್ಯಾಂಗ್ ಸ್ಟರ್ ಹತ್ಯೆ ಹಿನ್ನೆಲೆ: ದಿಲ್ಲಿಯ 80 ಜೈಲು ಅಧಿಕಾರಿಗಳ ವರ್ಗಾವಣೆ
ಹೊಸದಿಲ್ಲಿ: ತಿಹಾರ್ ಜೈಲಿನಲ್ಲಿ ದರೋಡೆಕೋರ ಟಿಲ್ಲು ತಾಜ್‌ಪುರಿಯ ಹತ್ಯೆಯ ಕುರಿತು ಅಧಿಕಾರಿಗಳಿಗೆ ದಿಲ್ಲಿ ಹೈಕೋರ್ಟ್ ಕೆಲವು ಪ್ರಶ್ನೆಗಳನ್ನು ಕೇಳಿದ ಒಂದು ದಿನದ ನಂತರ ಇಂದು ದಿಲ್ಲಿಯ 80 ಜೈಲು ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.
ಟಿಲ್ಲು ತಾಜ್ ಪುರಿಯನನ್ನು ಮೇ 2 ರಂದು ಆತನ ಪ್ರತಿಸ್ಪರ್ಧಿ ಗ್ಯಾಂಗ್‌ನ ಸದಸ್ಯರು ಕೊಂದಿದ್ದರು.
ಹಿರಿಯ ಅಧಿಕಾರಿಯೊಬ್ಬರ ಪ್ರಕಾರ, ಟಿಲ್ಲು ತಾಜ್‌ಪುರಿಯ ಹತ್ಯೆಯನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿದ್ದಾರೆ, ಇದು ತಳಮಟ್ಟದ ಬದಲಾವಣೆಗಳ ಅಗತ್ಯವನ್ನು ಪ್ರೇರೇಪಿಸಿತು.
ಕ್ರೂರ ದಾಳಿಗೆ ಪ್ರತಿಕ್ರಿಯಿಸಲು ವಿಳಂಬ ಮಾಡುತ್ತಿರುವ ಬಗ್ಗೆ ನ್ಯಾಯಾಲಯ ನಿನ್ನೆ ಜೈಲು ಅಧಿಕಾರಿಗಳನ್ನು ಪ್ರಶ್ನಿಸಿತ್ತು.
ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ಸಿಸಿಟಿವಿ ವೀಡಿಯೊದಲ್ಲಿ, ಭದ್ರತಾ ಸಿಬ್ಬಂದಿಯ ಮುಂದೆಯೇ ತಾಜ್‌ಪುರಿಯ ಮೇಲೆ ದಾಳಿ ನಡೆದಿರುವುದು ಕಂಡುಬಂದಿದೆ. ತಾಜ್ ಪುರಿಯಗೆ ಚೂರಿಯಿಂದ ಇರಿದ ನಂತರ ಆತನನ್ನು ಎಳೆದುಕೊಂಡು ಹೋಗಿದ್ದಾರೆ. ತಾಜ್‌ಪುರಿಯಾನನ್ನು ಪದೇ ಪದೇ ಇರಿದು ಎಳೆದೊಯ್ಯುತ್ತಿದ್ದಾಗ ಸಿಬ್ಬಂದಿ ಸಹಾಯಕ್ಕೆ ಧಾವಿಸಿರಲಿಲ್ಲ.
ಜೈಲಿನ ಆವರಣದಲ್ಲಿ ನಿಯೋಜನೆಗೊಂಡಿರುವ ಭದ್ರತಾ ಸಿಬ್ಬಂದಿ ಸಂವಹನಕ್ಕಾಗಿ ವಾಕಿ ಟಾಕಿಗಳನ್ನು ಹೊಂದಿಲ್ಲ ಏಕೆ ಎಂದು ಹೈಕೋರ್ಟ್ ಪ್ರಶ್ನಿಸಿದೆ ಹಾಗೂ ಇದು ಸ್ವೀಕಾರಾರ್ಹವಲ್ಲ ಎಂದು ಹೇಳಿದೆ.