ಮೋದಿಯ ಬೆಂಬಲವಿಲ್ಲದೆ ನಾನು 6 ಬಾರಿ ಸಂಸದನಾಗಿರುವುದು ಅವರ ಮೂರ್ಖ ಅಭಿಮಾನಿಗಳಿಗೆ ಗೊತ್ತಿಲ್ಲ: ಸುಬ್ರಮಣಿಯನ್‌ ಸ್ವಾಮಿ

Update: 2023-05-29 14:35 GMT

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಪದೇ ಪದೇ ಟೀಕಿಸಿ ಪಕ್ಷದ ಮುಜುಗರಕ್ಕೆ ಕಾರಣರಾಗುತ್ತಿರುವ ಹಿರಿಯ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಅವರು ಮತ್ತೆ ಪ್ರಧಾನಿ ನರೇಂದ್ರ ಮೋದಿ ಅವರ ಬೆಂಬಲಿಗರನ್ನು ಟೀಕಿಸಿದ್ದಾರೆ. 

ತನ್ನನ್ನು ಇನ್ನು ಮುಂದೆ ಸಂಸದರಾಗಲು ಪ್ರಧಾನಿ ಮೋದಿ ಅವರು ಬಿಡಲಿಕ್ಕಿಲ್ಲ ಎಂಬ ಪ್ರಧಾನಿ ಮೋದಿ ಅನುಯಾಯಿಗಳ ಟೀಕೆಗಳಿಗೆ ಪ್ರತಿಕ್ರಿಯಿಸಿದ ಸ್ವಾಮಿ, “ಮೋದಿಯ ಮೂರ್ಖ ಟ್ವಿಟರ್‌ ಅನುಯಾಯಿಗಳು ಮೂರ್ಖರು. ನನ್ನನ್ನು ಮತ್ತೊಮ್ಮೆ ಸಂಸದರನ್ನಾಗಿ ಮೋದಿ ಮಾಡುವುದಿಲ್ಲ ಎಂದು ಟ್ವೀಟ್‌ ಮಾಡುತ್ತಿದ್ದಾರೆ. ಮೂರ್ಖರಿಗೆ ಗೊತ್ತಿಲ್ಲ, ಮೋದಿಯ ಬೆಂಬಲವಿಲ್ಲದೆ ನಾನು 6 ಬಾರಿ ಸಂಸತ್ತಿಗೆ ಆಯ್ಕೆಯಾಗಿದ್ದೇನೆ; ಮೂರು ಬಾರಿ ಲೋಕಸಭೆಗೆ, ಮೂರು ಬಾರಿ ರಾಜ್ಯ ಸಭೆಗೆ” ಎಂದು ಟ್ವೀಟ್‌ ಮಾಡಿದ್ದಾರೆ. 
ಅಲ್ಲದೆ, ಪ್ರಧಾನಿ ಮೋದಿ ಸ್ಪರ್ಧಿಸುವ ವಾರಣಾಸಿ ಕ್ಷೇತ್ರದಿಂದಲೂ 7 ನೇ ಬಾರಿಗೆ ಆಯ್ಕೆಯಾಗುವ ವಿಶ್ವಾಸವನ್ನೂ ಸ್ವಾಮಿ ವ್ಯಕ್ತಪಡಿಸಿದ್ದಾರೆ.

Similar News