ರಾಷ್ಟ್ರಪತಿ ಮುರ್ಮುಗೆ ಸುರಿನಾಮೆಯ ಅತ್ಯುಚ್ಛ ನಾಗರಿಕ ಪ್ರಶಸ್ತಿ ಪ್ರದಾನ
ಪರಮರಿಬೊ, ಜೂ. 6: ಸುರಿನಾಮೆಯ ಅತ್ಯುಚ್ಛ ನಾಗರಿಕ ಪ್ರಶಸ್ತಿಯನ್ನು ಸುರಿನಾಮೆಯ ಅಧ್ಯಕರಾದ ಚಂದ್ರಿಕಾಪೆರ್ಸಾದ್ ಸಂಟೋಖಿ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಸೋಮವಾರ ಪ್ರದಾನ ಮಾಡಿದ್ದಾರೆ.
ಕಳೆದ ವರ್ಷಜುಲೈಯಲ್ಲಿ ರಾಷ್ಟ್ರಪತಿ ಹುದ್ದೆ ಸ್ವೀಕರಿಸಿದ ಬಳಿಕ ಮುರ್ಮು ಅವರು ಮೊದಲ ಭಾರಿಗೆ ಮೂರು ದಿನಗಳ ಭೇಟಿಗಾಗಿ ರವಿವಾರ ಸುರಿನಾಮೆಗೆ ಆಗಮಿಸಿದ್ದಾರೆ. ‘‘ಈ ಗೌರವ ಭಾರತ ಹಾಗೂ ಸುರಿನಾಮೆಯ ನಡುವೆ ಆಳವಾಗಿ ಬೇರೂರಿದ ದ್ವಿಪಕ್ಷೀಯ ಸಂಬಂಧವನ್ನು ಪ್ರತಿಬಿಂಬಿಸುತ್ತದೆ.
ದ್ರೌಪದಿ ಮುರ್ಮು ಅವರಿಗೆ ಸುರಿನಾಮೆಯ ಅತ್ಯುಚ್ಛ ನಾಗರಿಕ ಪ್ರಶಸ್ತಿಯಾದ ಗ್ರಾಂಡ್ ಆರ್ಡರ್ ಆಫ್ ದಿ ಚೈನ್ ಆಫ್ ದಿ ಯೆಲ್ಲೊ ಸ್ಟಾರ್ ಅನ್ನು ಅಧ್ಯಕ್ಷರಾದ ಸಂಟೋಕಿ ಪ್ರದಾನಿಸಿದರು’’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಟ್ವೀಟ್ ಮಾಡಿದೆ. ಪ್ರಶಸ್ತಿ ಸ್ವೀಕರಿಸಿದ ಬಳಿಕ ದ್ರೌಪದಿ ಮುರ್ಮು ಅವರು, ‘‘ಈ ಗುರುತಿಸುವಿಕೆ ನನಗೆ ಮಾತ್ರವಲ್ಲ, ನಾನು ಪ್ರತಿನಿಧಿಸುತ್ತಿರುವ ಭಾರತದ 140 ಕೋಟಿ ಜನರಿಗೆ ಅತ್ಯಂತ ಮಹತ್ವದ್ದಾಗಿದೆೆ’’ ಎಂದು ಟ್ವೀಟ್ ಮಾಡಿದ್ದಾರೆ.