ಲಕ್ನೋ ನ್ಯಾಯಾಲಯದ ಆವರಣದಲ್ಲೇ ಗ್ಯಾಂಗ್‌ಸ್ಟರ್ ಸಂಜೀವ್ ಮಹೇಶ್ವರಿ ಹತ್ಯೆ
Update: 2023-06-07 14:36 GMT
ಲಕ್ನೋ: ಗ್ಯಾಂಗ್‌ಸ್ಟರ್ ಹಾಗೂ ರಾಜಕಾರಣಿ ಮುಕ್ತಾರ್ ಅನ್ಸಾರಿಯ ಸಹಚರ ಸಂಜೀವ್ ಮಹೇಶ್ವರಿ ಜೀವಾ ಅವರನ್ನು ಬುಧವಾರ ಲಕ್ನೋ ನ್ಯಾಯಾಲಯದ ಆವರಣದಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಕೀಲರಂತೆ ವಸ್ತ್ರ ಧರಿಸಿ ನ್ಯಾಯಾಲಯ ಆವರಣಕ್ಕೆ ಬಂದಿದ್ದ ವ್ಯಕ್ತಿ ಹತ್ಯೆ ನಡೆಸಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
"ಲಖನೌ ಜೈಲಿನಲ್ಲಿದ್ದ ಸಂಜೀವ್ ಮಹೇಶ್ವರಿ ಜೀವಾ ಅವರನ್ನು ಪ್ರಕರಣವೊಂದರ ವಿಚಾರಣೆಗಾಗಿ ನ್ಯಾಯಾಲಯಕ್ಕೆ ಕರೆತರಲಾಗಿದ್ದು, ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆಗೈದಿದ್ದಾರೆ" ಎಂದು ಘಟನೆಯ ನಂತರ ನ್ಯಾಯಾಲಯದ ಆವರಣಕ್ಕೆ ಆಗಮಿಸಿದ ಲಕ್ನೋ ಪೊಲೀಸ್ ಕಮಿಷನರ್ ಎಸ್ ಬಿ ಶಿರಾಡ್ಕರ್ ಹೇಳಿದ್ದಾರೆ.