ಏಶ್ಯಕಪ್: ಇಶಾನ್ ಕಿಶನ್ ಅರ್ಧಶತಕ, ಪಾಕ್ ವಿರುದ್ಧ ಭಾರತ 30 ಓವರ್‌ಗಳಲ್ಲಿ 149/4

Update: 2023-09-02 12:46 GMT

Photo: AP

ಪಲ್ಲೆಕಲೆ, ಸೆ.2: ಮಳೆ ಬಾಧಿತ ಏಶ್ಯಕಪ್‌ನ ಗ್ರೂಪ್ ಎ ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡ ಪಾಕಿಸ್ತಾನದ ವಿರುದ್ಧ 30 ಓವರ್‌ಗಳ ಅಂತ್ಯಕ್ಕೆ 4 ವಿಕೆಟ್ ನಷ್ಟಕ್ಕೆ 149 ರನ್ ಗಳಿಸಿದೆ.

ಶನಿವಾರ 5ನೇ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 83 ರನ್ ಸೇರಿಸಿರುವ ವಿಕೆಟ್‌ಕೀಪರ್-ಬ್ಯಾಟರ್ ಇಶಾನ್ ಕಿಶನ್(ಔಟಾಗದೆ 56 ರನ್, 61 ಎಸೆತ)ಹಾಗೂ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ(ಔಟಾಗದೆ 40, 51 ಎಸೆತ)ತಂಡವನ್ನು ಆಧರಿಸಿದ್ದಾರೆ.

ಭಾರತ 66 ರನ್‌ಗೆ 4 ವಿಕೆಟ್ ಕಳೆದುಕೊಂಡಿದ್ದಾಗ ಈ ಇಬ್ಬರು ಜೊತೆಯಾದರು.

ಕಿಶನ್ 54 ಎಸೆತಗಳಲ್ಲಿ ಏಕದಿನ ಕ್ರಿಕೆಟ್ ನಲ್ಲಿ 7ನೇ ಅರ್ಧಶತಕವನ್ನುಪೂರೈಸಿದರು.

ಪಾಕ್ ಬೌಲಿಂಗ್‌ನಲ್ಲಿ ಶಾಹೀನ್ ಅಫ್ರಿದಿ(2-21) ಹಾಗೂ ರವೂಫ್(2-36) ತಲಾ ಎರಡು ವಿಕೆಟ್‌ಗಳನ್ನು ಪಡೆದಿದ್ದಾರೆ.

ಪಂದ್ಯಕ್ಕೆ ಈ ತನಕ ಎರಡು ಬಾರಿ ಮಳೆ ಅಡ್ಡಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Sathish

contributor

Byline - ವಾರ್ತಾಭಾರತಿ

contributor

Similar News