ಕೇಂದ್ರ-ರಾಜ್ಯ ಸರಕಾರಗಳ ಬೆಲೆ ಏರಿಕೆಯ ವಿರುದ್ಧ ಆಮ್ ಆದ್ಮಿ ಪಕ್ಷ ಪ್ರತಿಭಟನೆ

Update: 2025-04-05 21:37 IST
ಕೇಂದ್ರ-ರಾಜ್ಯ ಸರಕಾರಗಳ ಬೆಲೆ ಏರಿಕೆಯ ವಿರುದ್ಧ ಆಮ್ ಆದ್ಮಿ ಪಕ್ಷ ಪ್ರತಿಭಟನೆ
  • whatsapp icon

ಬೆಂಗಳೂರು : ಕೇಂದ್ರದ ಬಿಜೆಪಿ ಹಾಗೂ ರಾಜ್ಯದ ಕಾಂಗ್ರೆಸ್ ಸರಕಾರ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ, ವಿದ್ಯುತ್, ನೀರಿನ ದರ ಹೆಚ್ಚಳ, ಮೆಟ್ರೋ, ಆಸ್ತಿ ತೆರಿಗೆ, ಟೋಲ್, ವೀಸಾ ಶುಲ್ಕಗಳು, ರೈತರ ಪಂಪ್‍ಸೆಟ್‍ಗಳು ಸೇರಿದಂತೆ ನಿತ್ಯ ಬಳಸುವ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿರುವುದನ್ನು ವಿರೋಧಿಸಿ ಆಮ್ ಆದ್ಮಿ ಪಕ್ಷ ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸಿತು.

ಶನಿವಾರ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಪಕ್ಷದ ಕಾರ್ಯಾಧ್ಯಕ್ಷ ಸೀತಾರಾಮ್ ಗುಂಡಪ್ಪ, ಕೇಂದ್ರ ಮತ್ತು ರಾಜ್ಯ ಸರಕಾರ ಅಗತ್ಯ ವಸ್ತುಗಳ ಮೇಲೆ ಬೆಲೆ ಏರಿಕೆ ಮಾಡಿರುವುದು ಜನಸಾಮಾನ್ಯರ ಜೇಬಿಗೆ ಬರೆ ಎಳೆದಂತಾಗಿದೆ. ಇದು ಸಾಮಾನ್ಯ ಜನರನ್ನು ಹಗಲು ದರೋಡೆ ಮಾಡುತ್ತಿರುವುದು ಮಹಾದ್ರೋಹ ಎಂದು ಬೇಸರ ವ್ಯಕ್ತಪಡಿಸಿದರು.

ಸರಕಾರಗಳು ತಮ್ಮ ಖಜಾನೆಯನ್ನು ಭರ್ತಿ ಮಾಡಿಕೊಂಡು ಕಾಮಗಾರಿಗಳ ನೆಪದಲ್ಲಿ ಭ್ರಷ್ಟಾಚಾರ ಮಾಡುವ ಸಲುವಾಗಿ ಪ್ರಜೆಗಳ ಮೇಲೆ ತುಘಲಕ್ ಮಾದರಿಯ ತೆರಿಗೆಗಳನ್ನು ಹೇರಿ, ಎಲ್ಲ ದರಗಳನ್ನು ಹೆಚ್ಚಿಸುವ ಮೂಲಕ ದರೋಡೆ ಪ್ರವೃತ್ತಿಗೆ ಇಳಿದಿರುವುದು ದೇಶಕ್ಕೆ ಮಾರಕವಾಗಿದೆ. ಸರಕಾರದ ಈ ನಡೆಯ ವಿರುದ್ಧ ಜನಾಂದೋಲನವನ್ನು ಕೈಗೊಳ್ಳಲು ಮತದಾರರುಗಳ ಬಳಿ ಹೋಗಿ ಜನಜಾಗೃತಿ ಕಾರ್ಯಕ್ರಮಗಳನ್ನು ಮಾಡುತ್ತೇವೆ. ಈ ಮೂಲಕ ಸರಕಾರಗಳಿಗೆ ತಕ್ಕ ಪಾಠವನ್ನು ಕಲಿಸುವ ಕಾಲ ಸನಿಹದಲ್ಲಿದೆ ಎಂದು ಸೀತಾರಾಮ್ ಗುಂಡಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ರಾಜ್ಯ ಖಜಾಂಚಿ ಪ್ರಕಾಶ್ ನೆಡುಂಗಡಿ, ರಾಜ್ಯ ಉಪಾಧ್ಯಕ್ಷ ರುದ್ರಯ್ಯ ನವಲಿ ಮಠ, ನಗರ ಪ್ರಧಾನ ಕಾರ್ಯದರ್ಶಿ ಜಗದೀಶ್ ಚಂದ್ರ, ಅಶೋಕ್ ಮೃತ್ಯುಂಜಯ, ಶಶಿಧರ್ ಆರಾಧ್ಯ, ಅನಿಲ್ ನಾಚಪ್ಪ, ವೀಣಾ ಸರಾವ್, ಸತ್ಯ ವಾಣಿ, ಪುಷ್ಪಕೇಶವ, ಡಾ.ಎಲ್ಲಪ್ಪ ,ಜಗದೀಶ್ ಬಾಬು, ಶಮೀರ್ ಖಾನ್, ದೊಮ್ಮಲೂರು ಶಿವಕುಮಾರ್, ಗುರುಮೂರ್ತಿ, ಸಿದ್ದು ಸೇರಿದಂತೆ ಹಲವರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News