ಬೆಂಗಳೂರು | ಹೋಟೆಲ್‍ನಲ್ಲಿ ಬಾಂಬ್ ಸ್ಫೋಟಿಸುವುದಾಗಿ ಪೊಲೀಸ್ ಠಾಣೆಗೆ ಅನಾಮಧೇಯ ಪತ್ರ

Update: 2024-04-22 14:27 GMT

ಬೆಂಗಳೂರು: ಹೋಟೆಲ್‍ನಲ್ಲಿ ಬಾಂಬ್ ಸ್ಫೋಟಿಸುವುದಾಗಿ ನಗರದ ಜಾಲಹಳ್ಳಿ ಪೊಲೀಸ್ ಠಾಣೆಗೆ ಅನಾಮಧೇಯ ಪತ್ರವೊಂದು ಬಂದಿರುವುದು ವರದಿಯಾಗಿದೆ.

ಸೋಮವಾರ ಬೆಳಗ್ಗೆ 11:50ರ ಸುಮಾರಿಗೆ ಪೊಲೀಸ್ ಠಾಣೆಗೆ ಪತ್ರ ತಲುಪಿದ್ದು, ‘ನಗರದ ಎಚ್‍ಎಂಟಿ ಮೈದಾನದ ಸಮೀಪದ ಕದಂಬ ಗಾರ್ಡೇನಿಯಾ ಹೋಟೆಲ್‍ನಲ್ಲಿ ಬಾಂಬ್ ಇರಿಸಿದ್ದು, ಸ್ಫೋಟಿಸಲಿದ್ದೇನೆ' ಎಂದು ಬರೆಯಲಾಗಿದೆ. ಜತೆಗೆ ಪತ್ರದಲ್ಲಿ ಪೊಲೀಸರಿಗೆ ಬೆದರಿಕೆಯನ್ನು ಹಾಕಲಾಗಿದೆ ಎಂದು ತಿಳಿದುಬಂದಿದೆ.

ಎಚ್ಚೆತ್ತ ಪೊಲೀಸರು ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನ ದಳದೊಂದಿಗೆ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದಾಗ ಇದೊಂದು ಹುಸಿ ಬೆದರಿಕೆ ಎಂದು ಗೊತ್ತಾಗಿದೆ.

ಈ ಬಗ್ಗೆ ಜಾಲಹಳ್ಳಿ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News