ಬೆಂಗಳೂರಿನಲ್ಲಿವೆ 180 ಅಪಾಯಕಾರಿ ರಸ್ತೆ, ಗುಂಡಿ ; ಬಿಬಿಎಂಪಿಗೆ ವರದಿ ಸಲ್ಲಿಸಿದ ಸಂಚಾರ ಪೊಲೀಸರು

Update: 2024-08-16 14:23 GMT

ಸಾಂದರ್ಭಿಕ ಚಿತ್ರ

ಬೆಂಗಳೂರು : ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ರಸ್ತೆಗಳ ಸ್ಥಿತಿ ಹದಗೆಟ್ಟಿದ್ದು, ಇದರ ನಡುವೆ ನಗರ ವ್ಯಾಪ್ತಿಯಲ್ಲಿ ಅಪಾಯ ಉಂಟು ಮಾಡುವ 180 ರಸ್ತೆ, ಗುಂಡಿಗಳನ್ನು ಪತ್ತೆಹಚ್ಚಿ ಬಿಬಿಎಂಪಿಗೆ ಸಂಚಾರ ಪೊಲೀಸರು ವರದಿ ಸಲ್ಲಿಸಿದ್ದಾರೆ.

ಇತ್ತೀಚಿಗೆ ಸುರಿದ ಧಾರಾಕಾರ ಮಳೆಗೆ ರಸ್ತೆಗಳು ನೀರಿನಿಂದ ತುಂಬಿ ಹೋಗಿತ್ತು. ಅದರಲ್ಲೂ ತಗ್ಗು ಪ್ರದೇಶಗಳ ಸ್ಥಿತಿ ಹೇಳ ತೀರದ್ದಾಗಿತ್ತು. ಹಾಗಾಗಿ, ನಗರದೊಳಗೆ 180 ಅಪಾಯಕಾರಿ ರಸ್ತೆಗಳು ಇರುವ ಬಗ್ಗೆ ಸಂಚಾರ ಪೊಲೀಸರೇ ಪಟ್ಟಿ ಮಾಡಿದ್ದಾರೆ.

ನಗರದಲ್ಲಿ ಮಳೆ ಬಂದಾಗಲೆಲ್ಲಾ ಸಮಸ್ಯೆ ಸೃಷ್ಟಿಯಾಗುವ ಸ್ಥಳಗಳ ಬಗ್ಗೆ ವರದಿ ತಯಾರಿಸಿ ಸಂಚಾರ ಪೊಲೀಸರು ಬಿಬಿಎಂಪಿಗೆ ನೀಡಿದ್ದಾರೆ. ಮಳೆ ಬಂದಾಗ ಆಗುವ ಅವಾಂತರಗಳನ್ನು ಫೋಟೋ ಸಮೇತ ಬಿಬಿಎಂಪಿಗೆ ಪೊಲೀಸರು ನೀಡಿದ್ದಾರೆ.

ಈ ಬಗ್ಗೆ ಮಾತನಾಡಿದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಸದ್ಯ ಮಳೆ ಅವಾಂತರಗಳ ಬಗ್ಗೆ ಪೊಲೀಸರು ಕೊಟ್ಟಿದ್ದ ಜಾಗಗಳ ಪರಿಶೀಲನೆಗೆ ಪಾಲಿಕೆ ಅಧಿಕಾರಿಗಳು ಮುಂದಾಗಿದ್ದಾರೆ. ಮಳೆ ಬಂದಾಗ ಉಂಟಾಗುವ ಸಮಸ್ಯೆಗಳಿರುವ ಜಾಗಗಳನ್ನು ಅವರು ಗುರುತಿಸಿ ಪಟ್ಟಿ ಮಾಡಿ ನೀಡಿದ್ದಾರೆ. ಈ ಬಗ್ಗೆ ಪರಿಶೀಲನೆ ನಡೆಸಲು ಹೊರಟಿರುವ ಪಾಲಿಕೆ ಕೆಲವೆಡೆ ಕೆಲಸ ಆರಂಭಿಸಿದೆ ಎಂದು ನುಡಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News