ಪ್ರತೀ ಜಿಲ್ಲಾ ಕೇಂದ್ರಕ್ಕೆ ಜನಾಕ್ರೋಶ ಯಾತ್ರೆ: ಬಿ.ವೈ.ವಿಜಯೇಂದ್ರ

Update: 2025-04-07 11:11 IST
Photo of B.Y.Vijayendra

ಬಿ.ವೈ.ವಿಜಯೇಂದ್ರ

  • whatsapp icon

ಬೆಂಗಳೂರು: ''ಮೈಸೂರಿನಲ್ಲಿ ಇವತ್ತು ಮಧ್ಯಾಹ್ನ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ 3 ಗಂಟೆ ನಂತರ ಭ್ರಷ್ಟ- ಜನವಿರೋಧಿ ಕಾಂಗ್ರೆಸ್ ಸರಕಾರದ ವಿರುದ್ಧ ಜನಾಕ್ರೋಶ ಯಾತ್ರೆಗೆ ಕೇಂದ್ರದ ಸಚಿವ ಪ್ರಹ್ಲಾದ್ ಜೋಶಿ ಚಾಲನೆ ನೀಡುತ್ತಾರೆ'' ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತಿಳಿಸಿದ್ದಾರೆ.

ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಯಾತ್ರೆಯಲ್ಲಿ ನಮ್ಮ ಪಕ್ಷದ ಎಲ್ಲ ಹಿರಿಯ ಮುಖಂಡರು ಭಾಗವಹಿಸುತ್ತಾರೆ. ಜನಾಕ್ರೋಶ ಯಾತ್ರೆ 4 ಹಂತಗಳಲ್ಲಿ ನಡೆಯಲಿದೆ. ಇವತ್ತು ಮೈಸೂರು, ನಾಳೆ ಮಂಡ್ಯ, ಹಾಸನ, ನಾಡಿದ್ದು ಮಡಿಕೇರಿ, ಮಂಗಳೂರು- ಹೀಗೆ ಪ್ರತಿ ಜಿಲ್ಲಾ ಕೇಂದ್ರಗಳಿಗೆ ನಮ್ಮ ಜನಾಕ್ರೋಶ ಯಾತ್ರೆ ತೆರಳುತ್ತದೆ ಎಂದರು.

ಕಾಂಗ್ರೆಸ್ ಸರಕಾರದ ಬೆಲೆ ಏರಿಕೆ, ಮುಸ್ಲಿಮರಿಗೆ ಸರಕಾರಿ ಕಾಮಗಾರಿಗಳಲ್ಲಿ ಮೀಸಲಾತಿ, ದಲಿತರ ಅಭ್ಯುದಯಕ್ಕೆ ಮೀಸಲಿಟ್ಟ ಎಸ್ಇಪಿ, ಟಿಎಸ್ಪಿ ಹಣದ ವಿಚಾರದಲ್ಲಿ ದೋಖಾ ಸೇರಿ ಜನವಿರೋಧಿ ನೀತಿಯನ್ನು ರಾಜ್ಯದ ಜನರಿಗೆ ತಿಳಿಸುತ್ತೇವೆ ವಿಜಯೇಂದ್ರ ವಿವರಿಸಿದರು.

ಬಿಜೆಪಿ-ಜೆಡಿಎಸ್ ನಡುವೆ ಯಾವುದೇ ಒಡಕಿಲ್ಲ: 

ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಪಕ್ಷಗಳ ನಡುವೆ ಯಾವುದೇ ರೀತಿಯ ಒಡಕಿಲ್ಲ. ಜನಾಕ್ರೋಶ ಯಾತ್ರೆಯು ನಮ್ಮ ಪಕ್ಷದ ಹೋರಾಟವಾಗಿದೆ. ಇದಕ್ಕೆ ಜೆಡಿಎಸ್‍ನಿಂದ ಯಾವುದೇ ತಕರಾರು ಇಲ್ಲ. ಕಾಂಗ್ರೆಸ್ ಪಕ್ಷಕ್ಕೆ ಅಸ್ತಿತ್ವದ ಪ್ರಶ್ನೆ ಕಾಡುತ್ತಿದೆ. ಬಿಜೆಪಿ ಈಗ ವಿಶ್ವದ ಅತಿ ದೊಡ್ಡ ಪಕ್ಷವೆನಿಸಿದೆ. ದೇಶದಲ್ಲಿ 400ಕ್ಕೂ ಹೆಚ್ಚು ಸಂಸದರಿದ್ದ ಕಾಂಗ್ರೆಸ್ ಪಕ್ಷಕ್ಕೆ ಇವತ್ತು ಎಂತಹ ಪರಿಸ್ಥಿತಿ ಬಂದಿದೆ. ಬಿಜೆಪಿಗೆ ಅಸ್ತಿತ್ವದ ಪ್ರಶ್ನೆ ಕಾಡುತ್ತಿಲ್ಲ. ಬಿಜೆಪಿ ಸುಭದ್ರವಾಗಿದೆ ಎಂದು ಬಿ.ವೈ.ವಿಜಯೇಂದ್ರ ಹೇಳಿಡಿದರು.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News