ಎಸೆಸ್ಸೆಲ್ಸಿ ಪರೀಕ್ಷೆ ವೇಳೆ ವಿದ್ಯಾರ್ಥಿಗಳ ನಡುವೆ ಗಲಾಟೆ: ಮೂವರಿಗೆ ಚಾಕು ಇರಿತ

Update: 2024-03-28 17:25 GMT

ಸಾಂದರ್ಭಿಕ ಚಿತ್ರ 

ಬೆಂಗಳೂರು: ಎಸೆಸ್ಸೆಲ್ಸಿ ಪರೀಕ್ಷೆ ವೇಳೆ ವಿದ್ಯಾರ್ಥಿಗಳ ನಡುವೆ ಗಲಾಟೆ ನಡೆದು, ಮೂವರು ವಿದ್ಯಾರ್ಥಿಗಳಿಗೆ ಚಾಕು ಇರಿದ ಘಟನೆ ಇಲ್ಲಿನ ರಾಗಿಗುಡ್ಡ ಬಳಿ ವರದಿಯಾಗಿದೆ.

ಮಾ.27ರಂದು ಎಸೆಸ್ಸೆಲ್ಸಿ ಪರೀಕ್ಷೆ ಬರೆಯಲು ಬಂದ ವೇಳೆ ಈ ಘಟನೆ ನಡೆದಿದ್ದು, ಬೇರೆ ಬೇರೆ ಏರಿಯಾದಿಂದ ವಿದ್ಯಾರ್ಥಿಗಳು ರಾಗಿಗುಡ್ಡದ ಪರೀಕ್ಷಾ ಕೇಂದ್ರವಾದ ಖಾಸಗಿ ಶಾಲೆಗೆ ಬಂದಿದ್ದರು. ಈ ವೇಳೆ ಕ್ಷುಲ್ಲಕ ವಿಚಾರಕ್ಕೆ ರಾಗಿಗುಡ್ಡ ಮತ್ತು ಸಾರಕ್ಕಿ ಭಾಗದ ವಿದ್ಯಾರ್ಥಿಗಳ ನಡುವೆ ಗಲಾಟೆ ಶುರುವಾಗಿದೆ.

ಬಳಿಕ ಪರೀಕ್ಷೆ ಮುಗಿಸಿಕೊಂಡು ಹೋಗುವಾಗ ಮತ್ತೆ ಜಗಳವಾಗಿದ್ದು, ಗಲಾಟೆಯಲ್ಲಿ ಸಾರಕ್ಕಿಯ ಮೂವರು ವಿದ್ಯಾರ್ಥಿಗಳಿಗೆ ರಾಗಿ ಗುಡ್ಡದ ವಿದ್ಯಾರ್ಥಿಗಳು ಚಾಕು ಇರಿದಿದ್ದಾರೆ ಎಂದು ಆರೋಪಿಸಲಾಗಿದೆ.

ಘಟನೆ ಕುರಿತು ಇಲ್ಲಿನ ಜೆ.ಪಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News