ನೀವು ಮಾಡಿದ ಪಾಪ ನಿಮ್ಮನ್ನು ಬಿಡುವುದಿಲ್ಲ : ಡಿಕೆಶಿ ವಿರುದ್ಧ ಮುನಿರತ್ನ ವಾಗ್ದಾಳಿ

ಬೆಂಗಳೂರು : ‘ನನಗೆ ಮೊಟ್ಟೆ ಹೊಡೆಯಲು, ಮಸಿ ಬಳಿಯಲು ಹೀಗೆ ಎಲ್ಲದಕ್ಕೂ ರೇಟ್ ಫಿಕ್ಸ್ ಮಾಡಿದ್ದಾರೆ. ಲೋಕಸಭೆ ಚುನಾವಣೆ ಮುಗಿದ ನಂತರ ಈ ರೀತಿ ಟಾರ್ಗೆಟ್ ಮಾಡಿದ್ದಾರೆ ಎಂದು ಬಿಜೆಪಿ ಶಾಸಕ ಮುನಿರತ್ನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ, ಎಚ್.ಡಿ.ರೇವಣ್ಣ, ಸೂರಜ್ ರೇವಣ್ಣ ಎಲ್ಲ ಆಯಿತು. ಈಗ ಕೆ.ಎನ್.ರಾಜಣ್ಣ ಮೇಲೆ ಪ್ರಯತ್ನ ಮಾಡಿದ್ದಾರೆ. ಡಿ.ಕೆ.ಶಿವಕುಮಾರ್ ಮಹಾ ಪಾಪದ ಕೆಲಸ ಮಾಡಿದ್ದಾರೆ. ನೀವು ಮಾಡಿದ ಪಾಪ ನಿಮ್ಮನ್ನು ಬಿಡುವುದಿಲ್ಲ. ನಿಮ್ಮ ಕುಟುಂಬ ಬೆಳೆಯಬೇಕು, ನೀವು ಇನ್ನೂ ಮುಂದೆ ಇಂತಹ ನೀಚ ಕೆಲಸ ಮಾಡಬಾರದು. ನಾನು ಅತ್ಯಾಚಾರ ಮಾಡಿದ್ದರೆ ಸರ್ವನಾಶ ಆಗುತ್ತೇನೆ, ನಾನು ಹುಳ ಬಿದ್ದು ಸಾಯಬೇಕು. ಇಲ್ಲ ಅಂದರೆ ನೀವು ಹುಳ ಬಿದ್ದು ಸಾಯುತ್ತೀರಾ?’ ಎಂದು ಮುನಿರತ್ನ ಕಿಡಿಕಾರಿದರು.
ಡಿ.ಕೆ.ಶಿವಕುಮಾರ್ ಅವರು ಕಮಿಷನರ್ ಜೊತೆಯಲ್ಲಿ ಮಾತಾಡಿ ನನ್ನ ಮೇಲೆ ಒಂದು ಅತ್ಯಾಚಾರ ಪ್ರಕರಣ ದಾಖಲು ಮಾಡಿಸುತ್ತಾರೆ. ಅತ್ಯಾಚಾರ ಪ್ರಕರಣ ಎಫ್ಐಆರ್ ಹಾಕಬಾರದೆಂದರೆ ನೀನು ರಾಜೀನಾಮೆ ಕೊಡಬೇಕು ಎಂದು ಒತ್ತಡ ಹಾಕಿದರು. ನನ್ನ ಮೇಲೆಅತ್ಯಾಚಾರ ಪ್ರಕರಣ ಹಾಕಿರೋದ್ರಲ್ಲಿ ಡಿಕೆ ಶಿವಕುಮಾರ್ ಮತ್ತು ಡಿ.ಕೆ.ಸುರೇಶ್ ಕೈವಾಡ ಇದೆ. ಇದನ್ನು ಸಿಬಿಐಯಿಂದ ತನಿಖೆ ಮಾಡಿಸಿ ಎಂದು ಆಗ್ರಹಿಸಿದರು