ಬೆಂಗಳೂರು | ಗ್ರ್ಯಾಂಡ್ ಇಫ್ತಾರ್ ಸಂಗಮ

Update: 2025-03-21 23:13 IST
ಬೆಂಗಳೂರು | ಗ್ರ್ಯಾಂಡ್ ಇಫ್ತಾರ್ ಸಂಗಮ
  • whatsapp icon

ಬೆಂಗಳೂರು : ಸುನ್ನಿ ಸಂಘಟನೆಗಳ ಅಧೀನದಲ್ಲಿ ಖುದ್ದೂಸ್ ಸಾಹೇಬ್ ಈದ್ಗಾ ಮೈದಾನದಲ್ಲಿ ಶುಕ್ರವಾರ ಆಯೋಜಿಸಿದ್ದ ರೂಹಾನಿ ಇಜ್ತಿಮಾದ ಭಾಗವಾಗಿ ನಡೆದ ಗ್ರ್ಯಾಂಡ್ ಇಫ್ತಾರ್ ಸಂಗಮದಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ನೂರಾರು ಜನರು ಭಾಗವಹಿಸಿದ್ದರು. ಇದು ಬೆಂಗಳೂರಿನ ಅತಿದೊಡ್ಡ ಇಫ್ತಾರ್ ಸಂಗಮದಲ್ಲೊಂದಾಗಿತ್ತು.

ಇಫ್ತಾರ್‌ನಲ್ಲಿ ಇಂಡಿಯನ್ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್, ಡಾ.ಅಬ್ದುಲ್ ಹಕೀಮ್ ಅಝ್ಹರಿ, ರಾಜ್ಯ ವಕ್ಫ್ ಬೋರ್ಡ್ ಮಾಜಿ ಅಧ್ಯಕ್ಷ ಮೌಲಾನಾ ಎನ್.ಕೆ.ಎಂ.ಶಾಫಿ ಸಅದಿ, ಜುಮಾ ಮಸ್ಜಿದ್ ಟ್ರಸ್ಟ್ ಬೋರ್ಡ್ ಕಾರ್ಯದರ್ಶಿ ಉಸ್ಮಾನ್ ಶರೀಫ್ ಮತ್ತಿತರ ಪ್ರಮುಖರು ಹಾಜರಿದ್ದರು. ಆತ್ಮೀಯ ಸಂಗಮದ ಭಾಗವಾಗಿ ಸಂಜೆ ನಡೆದ ಕುಟುಂಬ ಮಿಲನ(ಫ್ಯಾಮಿಲಿ ಮೀಟ್)ದಲ್ಲಿ ನೂರಾರು ಕುಟುಂಬಗಳು ಭಾಗವಹಿಸಿದ್ದವು.

ಸೈಯ್ಯದ್ ಇಬ್ರಾಹೀಂ ಬಾಫಕೀ ತಳ್ ಪ್ರಾರ್ಥನೆ ಮೂಲಕ ಸಭೆಗೆ ಚಾಲನೆ ನೀಡಿದರು. ಮಾಜಿ ಕೇಂದ್ರ ಸಚಿವ ಸಿ.ಎಂ.ಇಬ್ರಾಹೀಂ ಕಾರ್ಯಕ್ರಮ ಉದ್ಘಾಟಿಸಿದರು. ಫಾಝಿಲ್ ನೂರಾನಿ ಕ್ಯಾಲಿಕಟ್ ವಿಷಯ ಮಂಡನೆ ನಡೆಸಿದರು.

ಸ್ಪೀಕರ್ ಯು.ಟಿ.ಖಾದರ್, ಎಸ್.ಎಂ.ಎ.ಅಧ್ಯಕ್ಷ ಹಕೀಮ್ ಆರ್.ಟಿ.ನಗರ, ಎಸ್.ಅಬ್ದರ‌್ರಹ್ಮಾನ್ ಹಾಜಿ, ಅನಸ್ ಸಿದ್ದಿಕಿ ಮತ್ತು ಜಾಫರ್ ನೂರಾನಿ ಉಪಸ್ಥಿತರಿದ್ದರು ಎಂದು ಪ್ರಕಟನೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News