ಗ್ಯಾರಂಟಿ ಹೆಸರಿನಲ್ಲಿ ಸರಕಾರ ಕನ್ನಡಿಗರಿಗೆ ನಂಬಿಕೆ ದ್ರೋಹ ಮಾಡುತ್ತಿದೆ : ಆರ್.ಅಶೋಕ್

Update: 2025-03-02 19:08 IST
ಗ್ಯಾರಂಟಿ ಹೆಸರಿನಲ್ಲಿ ಸರಕಾರ ಕನ್ನಡಿಗರಿಗೆ ನಂಬಿಕೆ ದ್ರೋಹ ಮಾಡುತ್ತಿದೆ : ಆರ್.ಅಶೋಕ್

ಆರ್.ಅಶೋಕ್

  • whatsapp icon

ಬೆಂಗಳೂರು : ‘ಪಂಚ ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಆಡಳಿತಾರೂಢ ಕಾಂಗ್ರೆಸ್ ಸರಕಾರ ಕನ್ನಡಿಗರಿಗೆ ನಂಬಿಕೆ ದ್ರೋಹ ಮಾಡುತ್ತಲೇ ಇದೆ’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಇಂದಿಲ್ಲಿ ಟೀಕಿಸಿದ್ದಾರೆ.

ರವಿವಾರ ಎಕ್ಸ್‌ ನಲ್ಲಿ ಪೋಸ್ಟ್ ಹಾಕಿರುವ ಅವರು, ‘ತಿಂಗಳು ತಿಂಗಳು ಸರಿಯಾದ ಸಮಯಕ್ಕೆ ಗೃಹಲಕ್ಷ್ಮಿ ಹಣವನ್ನ ಅಕೌಂಟ್‍ಗೆ ಹಾಕಲು ಅದೇನು ಸಂಬಳಾನಾ ಎಂದು ಉಡಾಫೆ ಮಾತಾಡಿ ಮಹಿಳೆಯರ ಸ್ವಾಭಿಮಾನಕ್ಕೆ ಪೆಟ್ಟು ಕೊಟ್ಟಿದ್ದ ಇಂಧನ ಸಚಿವ ಕೆ.ಜೆ.ಜಾರ್ಜ್ ಇದೀಗ ಗೃಹಜ್ಯೋತಿ ಯೋಜನೆ ಜಾರಿಯಲ್ಲಿ ಚೌಕಾಸಿ ಮಾಡುತ್ತಿದ್ದಾರೆ’ ಎಂದು ಟೀಕಿಸಿದ್ದಾರೆ.

‘ಸಚಿವ ಜಾರ್ಜ್ ಅವರೇ, ಚುನಾವಣೆಗೂ ಮುನ್ನ ಎಲ್ಲರಿಗೂ 200 ಯುನಿಟ್ ಉಚಿತ ಎಂದು ಹೇಳಿ ಅಧಿಕಾರಕ್ಕೆ ಬಂದ ಮೇಲೆ ವರ್ಷದ ಸರಾಸರಿ ಎಂದು ಟೋಪಿ ಹಾಕಿದಿರಿ. ಈಗ ಹೊಸದಾಗಿ ಮನೆ ಕಟ್ಟಿದವವರಿಗೆ, ಬಾಡಿಗೆ ಮನೆ ಬದಲಾಯಿಸಿದವರಿಗೆ ಗೃಹ ಯೋಜನೆಯ ಪೂರ್ಣ ಲಾಭ ಸಿಗುತ್ತಲೇ ಇಲ್ಲ’ ಎಂದು ಆರ್.ಅಶೋಕ್ ಆಕ್ಷೇಪಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News